ಬಂಗಾರಪೇಟೆ: ಬೇತಂಗಲದಲ್ಲಿ ಛಲವಾದಿ ಮಹಾಸಭಾ ಕೆಜಿಎಫ್ ತಾಲೂಕು ಘಟಕ ಪದಾಧಿಕಾರಿಗಳ ಆಯ್ಕೆ
ಛಲವಾದಿ ಜನಾಂಗದವರು ಹೊಲೆಯರೆಲ್ಲರೂ ಸಂಘಟಿತರಾಗಿ ಕೇಂದ್ರ - ರಾಜ್ಯ ಸರ್ಕಾರಗಳ ಸವಲತ್ತುಗಳನ್ನು ಪಡೆಯಲು ಒಗ್ಗಟ್ಟಾಗಬೇಕೆಂದು ಛಲವಾದಿ ಮಹಾಸಭಾದ ಜಿಲ್ಲಾಧ್ಯಕ್ಷ ಸಿ.ನಾರಾಯಣಪ್ಪ ಕರೆ ನೀಡಿದರು.ಬೇತಮಂಗಲ ಪ್ರವಾಸಿ ಮಂದಿರದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಛಲವಾದಿ ಮಹಾಸಭಾ ಕೆಜಿಎಫ್ ಶಾಖಾ ಪದಾಧಿಕಾರಿಗಳ ಆಯ್ಕೆ ಮಾಡಿ ಮಾತನಾಡಿದರು.ದಿವಂಗತ ಐ.ಎ.ಎಸ್ ಅಧಿಕಾರಿ ಕೆ .ಶಿವರಾಂ ಅವರ ಶ್ರಮದಿಂದ ರಾಜ್ಯದ ಅನೇಕ ಜಿಲ್ಲೆಗಳಲ್ಲಿ ಛಲವಾದಿ ಜನಾಂಗಕ್ಕಾಗಿ ಜಮೀನು ಮಂಜೂರು ಮಾಡಿದ್ದಾರೆ. ಇವು ಮಾರುಕಟ್ಟೆಯಲ್ಲಿ ಕೋಟ್ಯಂತರ ರೂಪಾಯಿ ಬೆಲೆ ಇದೆ. ಮುಂದಿನ ದಿನಗಳಲ್ಲಿ ಜನಾಂಗದ ಅರ್ಹರಿಗೆ ಉತ್ತಮ ವಿದ್ಯಾಭ್ಯಾಸ, ಉದ್ಯೋಗ, ಸರ್ಕಾರದ ಸವಲತ್ತುಗಳನ್ನು ದೊರಕಿಸಲು ಮೊದಲು ನಾವು ಒಗ್ಗಟ್ಟಾಗ ಬೇಕೆಂದರು.