ಮಂಡ್ಯ: ಹಳೇ ಬೂದನೂರಿನಲ್ಲಿ ಚಿರತೆ ದಾಳಿಗೆ 3 ಬಂಡೂರು ಕುರಿ ಬಲಿ
Mandya, Mandya | Oct 10, 2025 ಚಿರತೆಯೊಂದು ದಾಳಿ ನಡೆಸಿ 3 ಬಂಡೂರು ಕುರಿಯನ್ನು ಕೊಂದು ಹಾಕಿರುವ ಘಟನೆ ಹಳೇ ಬೂದನೂರು ಗ್ರಾಮದಲ್ಲಿ ಜರುಗಿದ್ದು ಶುಕ್ರವಾರ ವರದಿಯಾಗಿದೆ. ಗ್ರಾಮದ ಮಂಗಯ್ಯನಗರ ನಿವಾಸಿ ವಕೀಲ ಅರುಣ್ ಅವರ ಮನೆಯಲ್ಲಿ ಕೃತ್ಯ ಜರುಗಿದೆ. ಗುರುವಾರ ತಡರಾತ್ರಿ ಕುರಿ ಕೊಟ್ಟಿಗೆಗೆ ಲಗ್ಗೆ ಹಾಕಿರುವ ಚಿರತೆ ಒಂದು ಲಕ್ಷ ರೂ. ಬೆಲೆ ಬಾಳುವ 3 ಬಂಡೂರು ಕುರಿಗಳನ್ನು ಕೊಂದಿದೆ. ಸ್ಥಳಕ್ಕೆ ಅರಣ್ಯ ಅಧಿಕಾರಿ ಲೋಕೇಶ್, ವೈದ್ಯಾಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದರು. ಕಳೆದ ಹಲವು ದಿನಗಳಿಂದ ಗ್ರಾಮದ ಜನನಿಬಿಡ, ಗದ್ದೆಯಂಚಿನ ಮನೆಗಳಿಗೆ ಚಿರತೆ ದಾಳಿ ನಡೆಸಿ ನಾಯಿಗಳನ್ನು ತಿಂದು ಹಾಕಿದೆ. ಬೋನು ಇರಿಸಿದರೂ ಪ್ರಯೋಜನವಾಗಿಲ್ಲ. ಅರಣ್ಯ ಇಲಾಖೆ ಸೂಕ್ತ ಕಾರ್ಯಾಚರಣೆ ನಡೆಸಬೇಕೇಂದು ರೈತ ಮುಖಂಡ ಪುಟ್ಟಸ್ವಾಮಿ ಒತ್ತಾಯಿಸಿದ್ದಾರೆ.