ದಾಂಡೇಲಿ : ನಗರದ ಸಂಸ್ಕಾರ ಸಕಾರ ಭಾರತಿ, ಶ್ರೀ ಶಂಕರ ಮಠ, ಸಹ್ಯಾದ್ರಿ ಲಲಿತ ಕಲಾ ಕೇಂದ್ರ ಹಾಗೂ ಈ ಕೇಂದ್ರಗಳ ವಿದ್ಯಾರ್ಥಿಗಳು ಮತ್ತು ವಿದ್ಯಾರ್ಥಿಗಳ ಪಾಲಕರ ಆಶ್ರಯದಡಿ ಮತ್ತು ನೃತ್ಯ ಗುರು ಕೃಷ್ಣ ಭಾಗವತ ಅವರ ನೇತೃತ್ವದಲ್ಲಿ ನಗರದ ಶ್ರೀ ವೀರಭದ್ರೇಶ್ವರ ಸಭಾಭವನದಲ್ಲಿ ಶನಿವಾರ ಸಂಜೆ 6:00 ಗಂಟೆಯಿಂದ ರಾತ್ರಿ 10:00 ಗಂಟೆಯವರೆಗೆ ನಾಟ್ಯೋತ್ಸವ ಕಾರ್ಯಕ್ರಮವು ಸಂಭ್ರಮ ಸಡಗರದಿಂದ ಜರುಗಿತು. ಕಾರ್ಯಕ್ರಮವನ್ನು ಪತ್ರಕರ್ತ ಸಂದೇಶ ಎಷ್ಟು ಜೈನ್ ಮತ್ತು ಗಾಯಕ ಸುಧಾಮ ದಾನಗೇರಿ ಅವರು ಉದ್ಘಾಟಿಸಿದರು. ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಗಾಯತ್ರಿ ಗಣಪತಿ ಬೊಳಗುಡ್ಡೆ, ಗಾಯಕಿ ಶಶಿಕಲಾ ಚಂದ್ರಕಾಂತ್ ಗೋಪಿ ಭಾಗವಹಿಸಿದ್ದರು.