ಚಾಮರಾಜನಗರ: ನರೇಂದ್ರ ಮೋದಿ ಜನ್ಮದಿನ ಹಿನ್ನೆಲೆ ಬಿಜೆಪಿ ಮುಖಂಡರಿಂದ ಚಾಮರಾಜೇಶ್ವರನಿಗೆ ವಿಶೇಷ ಪೂಜೆ
ಪ್ರಧಾನಿ ನರೇಂದ್ರ ಮೋದಿ 75 ನೇ ವಸಂತಕ್ಕೆ ಕಾಲಿಟ್ಟ ಹಿನ್ನೆಲೆ ನಗರದ ಚಾಮರಾಜೇಶ್ವರ ದೇವಾಲಯದಲ್ಲಿ ಬಿಜೆಪಿ ಮುಖಂಡರು ವಿಶೇಷ ಪೂಜಾ ಕೈಂಕರ್ಯ ನೆರವೇರಿಸಿದರು. ರಾಜ್ಯ ಬಿಜೆಪಿ ಉಪಾದ್ಯಕ್ಷ ಎನ್ ಮಹೇಶ್, ಜಿಲ್ಲಾದ್ಯಕ್ಷ ನಿರಂಜನ್ ಕುಮಾರ್ ನೇತೃತ್ವದಲ್ಲಿ ಪೂಜೆ ಪುನಸ್ಕಾರ ನಡೆಸಿ ಚಾಮರಾಜೇಶ್ವರನಿಗೆ ನರೇಂದ್ರ ಮೋದಿ ಹೆಸರಿನಲ್ಲಿ ಅರ್ಚನೆ, ಅಭಿಷೇಕ ನಡೆಯಿತು. ನರೇಂದ್ರ ಮೋದಿ ಫೋಟೋ ಹಿಡಿದು ಜೈಕಾರ ಕೂಗಿದ ಮುಖಂಡರು ಅದ್ಧೂರಿಯಾಗಿ ಆಚರಣೆ ನಡೆಸಿದರು.