ಕೊಪ್ಪಳ: ನಗರದಲ್ಲಿ ಇಬ್ಬರು ಬಾಲಕರ ಮೇಲೆ ಬೀದಿ ನಾಯಿಗಳ ದಾಳಿಗೆ ಗಂಭೀರ ಗಾಯ, ಜಿಲ್ಲಾಸ್ಪತ್ರೆಗೆ ದಾಖಲು
Koppal, Koppal | Apr 14, 2025 ಕೊಪ್ಪಳ ಪಟ್ಟಣದ 19ನೇ ವಾರ್ಡ್ ಹಟಗಾರಪೇಟೆಯಲ್ಲಿ ಸಾಧಿಕ್ ಹಾಗೂ ಅಷಾಬ್ ಎಂಬ ಬಾಲಕರ ಮೇಲೆ ಬೀದಿ ನಾಯಿಗಳು ದಾಳಿ ಮಾಡಿ ಗಾಯ ಮಾಡಿವೆ. ಏಪ್ರಿಲ್ 14ರಂದು ಸೋಮವಾರ ಮಧ್ಯಾಹ್ನ ನಗರದ ಜಿಲ್ಲಾಸ್ಪತ್ರೆಯಲ್ಲಿ ಬಾಲಕರಿಗೆ ಚಿಕಿತ್ಸೆ ನೀಡಲಾಗುತ್ತಿದೆ ಎಂದು ತಿಳಿದುಬಂದಿದೆ.