ಯಳಂದೂರು: ಟಿ ಹೊಸೂರಿನಹೊನ್ನಳ್ಳಿ ಮಾರಮ್ಮ ದೇವಾಲಯದ ಬೀಗ ಹೊಡೆದು ಕಳ್ಳತನ ಯತ್ನ
ಟಿ ಹೊಸೂರಿನಹೊನ್ನಳ್ಳಿ ಮಾರಮ್ಮ ದೇವಾಲಯದ ಬೀಗ ಹೊಡೆದು ಕಳ್ಳತನ ಯತ್ನ ಚಾಮರಾಜನಗರ ಜಿಲ್ಲೆಯ ಯಳಂದೂರು ತಾಲೂಕಿನ ಟಿ.ಹೊಸೂರು ಗ್ರಾಮದ ಬಳಿ ಇರುವ ಹೊನ್ನಳ್ಳಿ ಮಾರಮ್ಮ ದೇವಾಲಯದಲ್ಲಿ ಗುರುವಾರ ರಾತ್ರಿ ಕಳ್ಳತನ ಯತ್ನ ನಡೆದಿರುವ ಘಟನೆ ಶುಕ್ರವಾರ ಮದ್ಯಾಹ್ಬ ಬೆಳಕಿಗೆ ಬಂದಿದೆ. ದೇವಾಲಯದ ಮುಂಭಾಗದ ಬೀಗವನ್ನು ಒಡೆದು ಒಳನುಗ್ಗಿದ ಕಳ್ಳರು, ದೇವಾಲಯದ ಹುಂಡಿಯನ್ನು ಹೊರತೆಗೆದು ನೋಟುಗಳಿಲ್ಲದ ಚಿಲ್ಲರೆ ಹಣವನ್ನು ಸ್ಥಳದಲ್ಲೇ ಬಿಟ್ಟು ಹೋಗಿದ್ದಾರೆ ಎನ್ನಲಾಗಿದೆ. ಸ್ಥಳೀಯರ ಪ್ರಕಾರ, ಹುಂಡಿಯಲ್ಲಿದ್ದ ಯಾವುದೇ ಬೆಲೆಬಾಳುವ ವಸ್ತುಗಳು ಅಥವಾ ನಗದು ಕಳವು ಆಗಿಲ್ಲ. ಆದರೂ ಈ ಯತ್ನದಿಂದ ದೇವಾಲಯದ ಭದ್ರತೆ ಕುರಿತಂತೆ ಪ್ರಶ್ನೆಗಳ ಮೂಡಿವೆ