ಕಾರವಾರ: ಕದ್ರಾ-ಕೊಡಸಳ್ಳಿ ರಸ್ತೆ ಸಂಚಾರ ಪ್ರಾರಂಭ:ನಗರದಲ್ಲಿ ಜಿಲ್ಲಾಧಿಕಾರಿ ಕೆ. ಲಕ್ಷ್ಮೀಪ್ರಿಯಾ
ಕಾರವಾರ ತಾಲೂಕಿನ ಕದ್ರಾ-ಕೊಡಸಳ್ಳಿ ಬಾಳೆಮನೆ ಗ್ರಾಮದಲ್ಲಿ ಈ ಹಿಂದೆ ಸುರಿದ ಭಾರಿ ಮಳೆಯಿಂದಾಗಿ ಗುಡ್ಡ ಕುಸಿತವಾದ ಹಿನ್ನಲೆ, ಕದ್ರಾ ಕೊಡಸಳ್ಳಿ ಕೆಪಿಸಿ ರಸ್ತೆಯಲ್ಲಿ ಸಾರ್ವಜನಿಕ/ ವಾಹನ ಸಂಚಾರವನ್ನು ನಿರ್ಬಂಧಿಸಿ ಹೊರಡಿಸಿದ ಪ್ರತಿಬಂಧಕಾಜ್ಞೆಯನ್ನು ಮಾರ್ಪಾಡಿಸಿ, ಕದ್ರಾ-ಕೊಡಸಳ್ಳಿ ಕೆಪಿಸಿ ರಸ್ತೆಯಲ್ಲಿ ಲಘು ವಾಹನಗಳು ಮಾತ್ರ ಸಂಚರಿಸಲು ಅವಕಾಶ ಕಲ್ಪಿಸಲಾಗಿದೆ ಎಂದು ಜಿಲ್ಲಾಧಿಕಾರಿ ಅವರು ಮಂಗಳವಾರ ಸಂಜೆ 6ಕ್ಕೆ ತಿಳಿಸಿದ್ದಾರೆ.