ಚಿಟಗುಪ್ಪ: ಪಟ್ಟಣ ಪಂಚಾಯತಿ ಆಗಿ ಮೇಲ್ದರ್ಜೆಗೇರಿಸಿದ ಕೀರ್ತಿ ಮಾಜಿ ಶಾಸಕ ಅಶೋಕ್ ಖೇಣಿ ಅವರಿಗೆ ಸಲ್ಲುತ್ತೆ : ಮನ್ನಾಎಖೆಳ್ಳಿಯಲ್ಲಿ ಆಸ್ಕರ್ ಫರ್ನಾಂಡಿಸ್
ಮನ್ನಾಎಖೆಳ್ಳಿ ಗ್ರಾಮ ಪಂಚಾಯಿತಿ ಆಗಿ ಇದ್ದದ್ದು ಪಟ್ಟಣ ಪಂಚಾಯಿತಿಯಾಗಿ ಮೇಲ್ದರ್ಜೆಗೆ ಏರಿಸಿದ್ದರ ಕೀರ್ತಿ ಮಾಜಿ ಶಾಸಕ ಅಶೋಕ್ ಖೇಣಿ ಸೇರಿದಂತೆ ಪಕ್ಷದ ಸಮಸ್ತ ಸಚಿವರು, ಎಂಎಲ್ಸಿ ಗಳಿಗೆ ಸಲ್ಲುತ್ತದೆ ಎಂದು ಪಕ್ಷದ ಯುವ ಘಟಕದ ಮುಖಂಡ ಆಸ್ಕರ್ ಫರ್ನಾಂಡಿಸ್ ತಿಳಿಸಿದರು. ಪಟ್ಟಣ ಪಂಚಾಯತಿಯಾಗಿ ಮೇಲ್ದರ್ಜೆಗೇರಿದ ವಿಷಯ ಅಧಿಕೃತವಾಗಿ ತಿಳಿಯುತ್ತಿದ್ದಂತೆ ಗುರುವಾರ ರಾತ್ರಿ 7:30ಕ್ಕೆ ಅಂಬೇಡ್ಕರ್ ವೃತ್ತದಲ್ಲಿ ಕಾಂಗ್ರೆಸ್ ಮುಖಂಡರು ಸಂಭ್ರಮಾಚರಣೆ ನಡೆಸಿದರು. ಇವಳೆ ಕಾಂಗ್ರೆಸ್ ಪಕ್ಷದ ವಿವಿಧ ಹಂತದ ಮುಖಂಡರು, ಗಣ್ಯರು ಹಾಜರಿದ್ದರು.