19 ಗ್ರಾಮಗಳ 39 ಕೆರೆಗಳಿಗೆ ಕೃಷ್ಣಾ ನದಿಯಿಂದ ನೀರು ತುಂಬಿಸುವ ಮಹತ್ವಾಕಾಂಕ್ಷೆ ಯೋಜನೆ ಯಶಸ್ವಿಯಾಗಿದೆ ಎಂದು ಶಾಸಕ ದುರ್ಯೋಧನ ಐಹೊಳೆ ಹೇಳಿದರು. ಸುಮಾರು 100 ಕೋಟಿ ಅನುದಾನದಲ್ಲಿ ಬಾವನ ಸವದತ್ತಿ ಗ್ರಾಮ ಸಮೀಪದ ಕೃಷ್ಣಾ ನದಿಯ ದಡದಲ್ಲಿ ನಿರ್ಮಿಸಲಾದ ಈ ಯೋಜನೆ, ಕೃಷಿ ಅಭಿವೃದ್ಧಿಗೆ, ಭೂಗರ್ಭ ಜಲಮಟ್ಟ ಏರಿಕೆಗೆ, ರೈತರ ಆರ್ಥಿಕ ಬಲವರ್ಧನೆಗೆ, ಗ್ರಾಮೀಣ ಜೀವನಮಟ್ಟ ಸುಧಾರಣೆಗೆ ದೊಡ್ಡ ಮಟ್ಟದಲ್ಲಿ ನೆರವಾಗಲಿದೆ. ಎಂದರು ಭಾನುವಾರ ಬಾವನ ಸವದತ್ತಿ ಗ್ರಾಮದಲ್ಲಿ ಪ್ರತಿಕ್ರಿಯೆ ನೀಡಿದರು ಈ ಯೋಜನೆ ರಾಯಬಾಗ ವಿಧಾನಸಭಾ ಕ್ಷೇತ್ರದ ಸಾವಿರಾರು ಎಕರೆ ಕೃಷಿಭೂಮಿಗೆ ಹೊಸ ಜೀವ ತುಂಬಿದ್ದೆ