ಬೆಳಗಾವಿ: ಖಡೇಬಜಾರ, ಶಹಾಪೂರ & ತಿಲಕವಾಡಿ ಪೊಲೀಸ್ರಿಂದ ನಗರದಲ್ಲಿ ಮಟ್ಕಾ ದಾಳಿ ಆರೋಪಿಗಳ ಬಂಧನ
ಆರೋಪಿತನಾದ ಪ್ರಥಮೇಶ ರಾಜು ಬರಮುಚೆ ದೇವಾಂಗ ನಗರ ವಡಗಾಂವ ಇವನು ತನ್ನ ಸ್ವಂತ ಲಾಭಗೋಸ್ಕರ ವಡಗಾಂವ ಮಲಪ್ರಭಾ ನಗರದ ಸಾರ್ವಜನಿಕ ಸ್ಥಳದಲ್ಲಿ ನಿಂತುಕೊಂಡು ಕಲ್ಯಾಣ ಮಟಕಾ ಎಂಬುವ ಓ.ಸಿ ಅಂಕಿ ಸಂಖ್ಯೆಗಳ ಮೇಲೆ ಸಾರ್ವಜನಿಕರಿಂದ ಹಣ ಇಸಿದುಕೊಂಡು ಆಟದಲ್ಲಿ ತೊಡಗಿದ್ದಾಗ ಬಂದ ಮಾಹಿತಿಯಂತೆ ಶಹಾಪೂರ ಪಿಎಸ್ ಐ ಎಸ್. ಎನ್. ಬಸವಾ,& ಸಿಬ್ಬಂದಿಯವರು ದಾಳಿ ಮಾಡಿದ್ದು ಆರೋಪಿತನಿಂದ ಒಟ್ಟು 2240/- ನಗದು ಹಣ,ಓ.ಸಿ ಸಂಖ್ಯೆ ಚೀಟಿಗಳು ಜಪ್ತಿಪಡಿಸಿಕೊಂಡು ಆರೋಪಿತನ ವಿರುದ್ಧ ಶಹಾಪೂರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ಆರೋಪಿತನ ವಿರುದ್ಧ ಕಾನೂನು ಕ್ರಮ ಜರುಗಿಸಿ ಇಂದು ಗುರುವಾರ 3 ಗಂಟೆಗೆ ಪ್ರಕರಣದ ತನಿಖೆ ಮುಂದುವರೆಸಲಾಗಿದೆ.