ಪಜೀರು ಗ್ರಾಮದ ಬೊಳ್ಳೂರು ಎಂಬಲ್ಲಿ ಪತ್ರ ಬರೆದು ವೃದ್ದ ಆತ್ಮಹತ್ಯೆ
ಸುರಂಗದ ಬಾವಿಯಲ್ಲಿದ್ದೇನೆ ಎಂದು ಪತ್ರ ಬರೆದಿಟ್ಟು ವೃದ್ಧರೊಬ್ಬರು ಬಾವಿಗೆ ಹಾರಿ ಆತ್ಮಹತ್ಯೆಗೈದ ಘಟನೆ ಪಜೀರು ಗ್ರಾಮದ ಬೊಳ್ಳೂರು ಎಂಬಲ್ಲಿ ರವಿವಾರ ರಾತ್ರಿ ನಡೆದಿದೆ. ಲಕ್ಷ್ಮಣ ಸಾಲಿಯಾನ್( 75) ಆತ್ಮಹತ್ಯೆಗೈದ ವೃದ್ಧ. ರವಿವಾರ ರಾತ್ರಿ ಟಿವಿ ವೀಕ್ಷಣೆ ಮಾಡುತ್ತಿದ್ದ ಇವರು ಮನೆ ಮಂದಿ ಮಲಗಿದ ಬಳಿಕ ಪತ್ರ ಬರೆದಿಟ್ಟು ಸಮೀಪದ ತೋಟದ ಬಾವಿಗೆ ಹಾರಿ ಆತ್ಮಹತ್ಯೆಗೈದಿದ್ದಾರೆ. ಮೊಬೈಲ್ ನಡಿಯಲ್ಲಿ ಪತ್ರ ಬರೆದಿಟ್ಟಿದ್ದ ಇವರು "ನಾನು ಸಮೀಪದ ಸುರಂಗದ ಬಾವಿಯಲ್ಲಿದ್ದೇನೆ. ನನ್ನ ಮೃತದೇಹವನ್ನು ಮಂದಿರದ ಆಂಬ್ಯುಲೆನ್ಸ್ ನಲ್ಲಿ ಸಾಗಿಸಿ. ಯಾರೂ ಬೇಸರಿಸಬೇಡಿ' ಎಂದು ಪತ್ರದಲ್ಲಿ ಬರೆದಿದ್ದರು ಎಂದು ತಿಳಿದುಬಂದಿದೆ.