ವಿಜಯಪುರ: ಆದಿಶಕ್ತಿ ತರುಣ ಮಂಡಳಿ ವತಿಯಿಂದ ನಗರದಲ್ಲಿ ನವರಾತ್ರೀ ಅಂಗವಾಗಿ ಉಡಿ ತುಂಬವ ಕಾರ್ಯಕ್ರಮ ಆಯೋಜನೆ
ನಗರದ ಶ್ರೀ ಸಿದ್ದೇಶ್ವರ ಆದಿಶಕ್ತಿ ತರುಣ ಮಂಡಳಿಯ ವತಿಯಿಂದ ರಾಮಮಂದಿರ ರಸ್ತೆಯಲ್ಲಿ ನಡೆಯುತ್ತಿರುವ ನವರಾತ್ರಿ ಉತ್ಸವ ಕಾರ್ಯಕ್ರಮ ವಿಜೃಂಭಣೆಯಿಂದ ಆಚರಣೆ ಮಾಡಲಾಗುತ್ತಿದೆ. ಕಳೆದ 46 ವರ್ಷಗಳಿಂದ ದಸರಾ ಉತ್ಸವ ವಿಜೃಂಭಣೆಯಿಂದ ಆಚರಣೆ ಮಾಡಲಾಗುತ್ತಿದೆ. ಇನ್ನೂ 25 ವರ್ಷದ ಆಚರಣೆ ಪ್ರಯುಕ್ತ 101 ಕೆಜಿಯ 6 ಅಡಿಯ ನಾಡದೇವಿಯ ಬೆಳ್ಳಿ ಮೂರ್ತಿ ಪ್ರತಿಷ್ಟಾಪನೆ ಮಾಡಲಾಗಿದೆ. ಈ ಬಾರಿ ಉಜ್ಜಯಿನಿ ಮಹಾಕಾಳೇಶ್ವರ ದೇವಸ್ಥಾನದ ಮಾದರಿಯಲ್ಲಿ ಮಾಡಿದ್ದಾರೆ.