ಹುಮ್ನಾಬಾದ್: ನಗರದಲ್ಲಿ ನವರಾತ್ರಿ ಉತ್ಸವದ ಅಂಗವಾಗಿ ವೀರಭದ್ರೇಶ್ವರ ಹಾಗೂ ಅಂಬಾಭವಾನಿ ಪಲ್ಲಕ್ಕಿ ಉತ್ಸವ
ನಗರದಲ್ಲಿ ನವರಾತ್ರಿ ಉತ್ಸವದ ಅಂಗವಾಗಿ ಗುರುವಾರ ರಾತ್ರಿ 8ಕ್ಕೆ ವೀರಭದ್ರೇಶ್ವರ ಹಾಗೂ ಅಂಬಾಭವಾನಿ ಪಲ್ಲಕ್ಕಿ ಉತ್ಸವ ಅತ್ಯಂತ ಶ್ರದ್ಧಾ ಭಕ್ತಿಯಿಂದ ನೆರವೇರಿತು. ವೀರರೇಣುಕ ಗಂಗಾಧರ ಮಹಾಸ್ವಾಮಿಜಿ ಸಾನಿಧ್ಯದಲ್ಲಿ ನಡೆದ ಮೆರವಣಿಗೆಯಲ್ಲಿ ಮಾಜಿ ಸಚಿವ ಚಂದ್ರಶೇಖರ್ ಭೀಮರಾವ್ ಪಾಟೀಲ್, ವೀರಣ್ಣ ಪಾಟೀಲ, ಭಾವಸಾರ ಕ್ಷತ್ರಿಯ ಸಮಾಜ ಅಧ್ಯಕ್ಷ ಸುರೇಶ ಕಮಿತ್ಕರ್ ಉಪಾಧ್ಯಕ್ಷ ಗಿರಿಧರ ಡಯಜೋಡೆ, ಪ್ರಧಾನ ಕಾರ್ಯದರ್ಶಿ ದಿಗಂಬರ್ ಖಮಿತ್ಕರ್ ಇದ್ದರು.