ಕಾರವಾರ: ನಗರದ ಕಾಜುಭಾಗದಲ್ಲಿ ಕನ್ನಡ ಸಾಹಿತ್ಯ ಪರಿಷತ್ ನ ಆಜೀವ ಸದಸ್ಯರ ಸಭೆ
ರವಿವಾರ ಮಧ್ಯಾಹ್ನ 1ಕ್ಕೆ ನಗರದಲ್ಲಿ ಹಮ್ಮಿಕೊಂಡಿದ್ದ ಉತ್ತರ ಕನ್ನಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಆಜೀವ ಸದಸ್ಯರ ಸಭೆ ಹಾಗೂ ವಾರ್ಷಿಕ ಲೆಕ್ಕಪತ್ರ ಮಂಡನಾ ಸಭೆ ನಡೆಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಸಾಪ ಜಿಲ್ಲಾಧ್ಯಕ್ಷ ಬಿ.ಎನ್. ವಾಸರೆ ವಹಿಸಿದ್ದರು. ಜಿಲ್ಲಾ ಗೌರವ ಕಾರ್ಯದರ್ಶಿ ಜಾರ್ಜ್ ಫರ್ನಾಂಡೀಸ್, ತಾಲೂಕಾಧ್ಯಕ್ಷ ರಾಮಾ ನಾಯ್ಕ, ಆಜೀವ ಸದಸ್ಯರ ಪರವಾಗಿ ಅಂಕೋಲೆಯ ಮೋಹನ ಹಬ್ಬು, ಡಾ. ಮಹೇಶ ಗೋಳಿಕಟ್ಟೆ, ಟಿ.ಬಿ. ಹರಿಕಾಂತ, ಜಿ.ಡಿ. ಮನೋಜೆ, ಮಾಧವ ನಾಯಕ ಕಾರ್ಯಕ್ರಮದಲ್ಲಿದ್ದರು.