ಬೇಲೂರು: ಗೆಂಡೆಹಳ್ಳಿ ಗ್ರಾಮದಲ್ಲಿ ಮನೆಯ ಮುಂದೆ ನಿಲ್ಲಿಸಿದ್ದ ಮಾರುತಿ ರಿಟ್ಜ್ ಕಾರನ್ನು ಕದ್ದೊಯ್ದ ಕಳ್ಳರು
Belur, Hassan | Oct 8, 2025 ಮನೆಯ ಮುಂದೆ ನಿಲ್ಲಿಸಿದ್ದ ಮಾರುತಿ ರಿಟ್ಜ್ ಕಾರನ್ನು ಕದ್ದೊಯ್ದ ಕಳ್ಳರು ಬೇಲೂರು : ಮನೆಯ ಮುಂದೆ ನಿಲ್ಲಿಸಿದ್ದ ಮಾರುತಿ ರಿಟ್ಜ್ ಕಾರನ್ನು ಕದ್ದೊಯ್ದಿರುವ ಘಟನೆ ಬೇಲೂರು ತಾಲೂಕಿನ ಗೆಂಡೆಹಳ್ಳಿ ಗ್ರಾಮದಲ್ಲಿ ನಡೆದಿದೆ. ಮಂಗಳವಾರ ಬೆಳಗಿನ ಜಾವ 4 ಗಂಟೆ ಸುಮಾರಿಗೆ , ಗ್ರಾಮದ ಸದ್ದಾಂ ಎಂಬುವರಿಗೆ ಸೇರಿದ ಸಿಲ್ವರ್ ಬಣ್ಣದ KA18N4510 ಸಂಖ್ಯೆಯ ಕಾರನ್ನು ಕಳ್ಳರು ಕದ್ದೋಯ್ದಿದ್ದಾರೆ. ಕಳ್ಳರು ಕಾರನ್ನು ಕದ್ದೋಯ್ದಿರುವ ದೃಶ್ಯ ಸಿಸಿ ಕ್ಯಾಮಾರದಲ್ಲಿ ಸೆರೆಯಾಗಿದೆ.ಈ ಬಗ್ಗೆ ಬೇಲೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಕಾರಿನ ಬಗ್ಗೆ ಮಾಹಿತಿ ಸಿಕ್ಕಲ್ಲಿ ಹತ್ತಿರದ ಪೊಲೀಸ್ ಠಾಣೆಗೆ ಮಾಹಿತಿ ನೀಡುವಂತೆ ಕಾರಿನ ಮಾಲೀಕ ಸದ್ದಾಂ ಕೋರಿದ್ದಾರೆ.