ಯಳಂದೂರು: ಬಿಳಿಗಿರಿರಂಗನಬೆಟ್ಟ ದೇವಾಲಯದ ಹುಂಡಿ ಎಣಿಕೆಯಲ್ಲಿ ಹಣ ಕಳವು ಯತ್ನ: ಯಳಂದೂರು ಠಾಣೆಯಲ್ಲಿ ಪ್ರಕರಣ ದಾಖಲು
ಯಳಂದೂರು:ಬಿಳಿಗಿರಿರಂಗನಬೆಟ್ಟದ ಪ್ರಸಿದ್ಧ ರಂಗನಾಥಸ್ವಾಮಿ ದೇವಾಲಯದಲ್ಲಿ ಗೋಲಕ ಹಣದ ಎಣಿಕೆಯ ವೇಳೆ ಹಣ ಕಳ್ಳತನ ಮಾಡುತ್ತಿರುವಾಗ ಇಬ್ಬರು ಶಂಕಿತರು ಪೊಲೀಸರ ಕೈಗೆ ಬಿದ್ದಿದ್ದು. ಆರೋಪಿತರ ಮೇಲೆ ಯಳಂದೂರು ಪಟ್ಟಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮಂಡ್ಯ ಜಿಲ್ಲೆಯ ಶರವಣ್ ಮತ್ತು ಗಿರೀಶ್ ಎಂಬುವವರು ದೇವಾಲಯದ ಎಣಿಕೆ ಕಾರ್ಯದಲ್ಲಿ ಭಾಗವಹಿಸುತ್ತಿದ್ದರು. ಈ ವೇಳೆ ಇವರು ಹಣ ಎಣಿಕೆ ಮಧ್ಯದಲ್ಲಿ ಹೊರಗೆ ಹೋಗಿ ಬರುವ ದೃಶ್ಯ ಅನುಮಾನ ಉಂಟುಮಾಡಿತು. ಠಾಣೆ ಪೊಲೀಸರು ಅವರ ಮೇಲೆ ನಿಗಾ ಇಟ್ಟು ಕಾರು ತಪಾಸಣೆ ನಡೆಸಿದಾಗ, ಕಾರಿನ ಮ್ಯಾಟ್ ಕೆಳಗೆ ₹63,019 ನಗದು ಹಣ ಪತ್ತೆಯಾಯಿತು. ದೇವಾಲಯದಲ್ಲಿ ಪ್ರತಿ ಎರಡು ತಿಂಗಳಿಗೆ ಗೋಲಕ ಹಣದ ಎಣಿಕೆ ನ