ಹುಮ್ನಾಬಾದ್: ಕುಡಿಯುವ ನೀರಿಗೆ ವಿಷ ಹಾಕಿ ಎಲ್ಲರನ್ನೂ ಸಾಯಿಸಿಬಿಡಿ, ಇಲ್ಲವೇ ಸಿಂಧನಕೇರಾ ತ್ಯಾಜ್ಯ ವಿಲೇವಾರಿ ಘಟಕ ಸ್ಥಳಾಂತರಿಸಿ #localissue
ತಾಲೂಕಿನ ಸಿಂಧನಕೇರಾ ಸರ್ವೆ ನಂಬರ್ ನಲ್ಲಿ ಇರುವ ಹುಮ್ನಾಬಾದ್ ಪುರಸಭೆ ತ್ಯಾಜ್ಯ ವಿಲೇವಾರಿ ಘಟಕದಿಂದ ಗ್ರಾಮಸ್ಥರಿಗೆ ಕಾಯಿಲೆಗಳು ಬರುತ್ತಿದ್ದು ಜನ ನರಕಯಾತನೆ ಅನುಭವಿಸುತ್ತಿದ್ದು, ಅದನ್ನು ಶೀಘ್ರ ಸ್ಥಳಾಂತರ ಮಾಡಬೇಕು ಎಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ. ಈ ಕುರಿತಂತೆ ಗುರುವಾರ ಸಂಜೆ 7:15ಕ್ಕೆ ಮಾತನಾಡಿದ ಗ್ರಾಮದ ಹಿತಚಿಂತಕ, ಸಾಮಾಜಿಕ ಕಾರ್ಯಕರ್ತ ಯುವರಾಜ್ ಐಹೊಳೆ ಹೇಳಿದ್ದು ಹೀಗೆ ಗ್ರಾಮಸ್ಥರಿಗೆ ಪೂರೈಸುವ ಕುಡಿಯುವ ನೀರಿಗೆ ವಿಷ ಬೆರೆಸಿ ನಮಗೆಲ್ರಿಗೂ ಒಂದೇ ಬಾರಿ ಸಾಯಿಸ್ಬಿಡಿ ಎಂದು ಮನವಿ ಮಾಡಿದರು.