ಇಳಕಲ್: ನಗರದಲ್ಲಿ ದೀಪಾವಳಿ ಸಂಭ್ರಮ ಮಾರುಕಟ್ಟೆಗೆ ಲಗ್ಗೆ ಇಟ್ಟ ಪೂಜಾ ವಸ್ತುಗಳು
Ilkal, Bagalkot | Oct 20, 2025 ದೀಪಾವಳಿ ಸಡಗರ ಸಂಭ್ರಮ ತುಂಬಿ ತುಳುಕಿದೆ, ಹಬ್ಬಕ್ಕಾಗಿ ಇಳಕಲ್ ನಗರದ ಕಂಠಿ ಸರ್ಕಲ್, ಗಾಂಧಿ ಚೌಕ, ಬಜಾರ ಪೂಜಾ ಸಾಮಾಗ್ರಿಗಳು ವಸ್ತುಗಳು ತುಂಬಿ ತುಳುಕುತ್ತಿದ್ದು, ದೀಪಾವಳಿ ಸಂಭ್ರಮ ಮನೆ ಮಾಡಿದೆ. ಚಂಡು ಹೂವು, ಬಾಳೆ ಕಾಯಿ, ಕಬ್ಬಿಣ ಗಳ, ಮಾಲೆ, ಕುಂಬಳಕಾಯಿ, ಹಣ್ಣು ಹಂಪಲಗಳು, ದೀಪದ ಪಣತಿ, ವಿದ್ಯುತ್ ಅಲಂಕಾರದ ಮಳಿಗೆಗಳಲ್ಲಿ ಗ್ರಾಹಕರ ವ್ಯಾಪಾರ ಜೋರಾಗಿ ನಡೆಯಿತು. ವಾಹನಸವಾರರು ತಮ್ಮ ವಾಹನಗಳನ್ನು ರಸ್ತೆಯಲ್ಲಿಯೇ ಬಿಟ್ಟು ಹೋಗಿದ್ದರಿಂದ ಟ್ರಾಫಿಕ್ ಸಮಸ್ಯೆ ಕಿರಿ ಕಿರಿಯನ್ನು ಉಂಟು ಮಾಡುತ್ತಿತ್ತು. ಪೋಲಿಸರು ಆಗಮಿಸಿ ಟ್ರಾಪಿಕ್ ಸಮಸ್ಯೆಯನ್ನು ಸ್ವಲ್ಪ ತಪಿಸಿದರು.