ರಾಮದುರ್ಗ: ಖಾಸಗಿ ತರಕಾರಿ ಮಾರುಕಟ್ಟೆ ಬಂದ ಮಾಡದಂತೆ ನಗರದಲ್ಲಿ ವಿವಿಧ ರೈತ ಪರ ಸಂಘಟನೆಗಳು ಮತ್ತು ವ್ಯಾಪಾರಸ್ಥರು ಪ್ರತಿಭಟನೆ
ಖಾಸಗಿ ತರಕಾರಿ ಮಾರುಕಟ್ಟೆ ಬಂದ್ ಮಾಡದಂತೆ ವಿವಿಧ ರೈತ ಪರ ಸಂಘಟನೆಗಳು ಮತ್ತು ವ್ಯಾಪಾರಸ್ಥರು ಪ್ರತಿಭಟನೆ ನಡೆಸಿದರು. ಖಾಸಗಿ ಮಾರುಕಟ್ಟೆಯಲ್ಲಿ 300 ಮಳಿಗೆಗಳ ವ್ಯಾಪಾರಸ್ಥರು ಮತ್ತು ಕಾರ್ಮಿಕರು ಬೀದಿಗೆ ಬೀಳುವ ಪರಿಸ್ಥಿತಿ ಎದುರಾಗಿದೆ. ಹತ್ತು ವರ್ಷದ ಟ್ರೇಡಿಂಗ್ ಲೈಸೆನ್ಸ್ ಪಡೆದಿದ್ದರೂ ಸರ್ಕಾರ ಏಕಾಏಕಿ ಅದನ್ನು ರದ್ದು ಮಾಡಿರುವುದು ವ್ಯಾಪಾರಸ್ಥರಲ್ಲಿ ಅಸಮಾಧಾನ ಮೂಡಿಸಿದರು. ಬುಧವಾರ, ವಿವಿಧ ರೈತ ಪರ ಸಂಘಟನೆಗಳು ಮತ್ತು ವ್ಯಾಪಾರಸ್ಥರು ಹಾಗೂ ಕಾರ್ಮಿಕರು ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಜೈ ಕಿಸಾನ್ ಖಾಸಗಿ ಮಾರುಕಟ್ಟೆ ಅನುಮತಿಯನ್ನು ಸರ್ಕಾರ ರದ್ದು ಮಾಡಿರುವುದನ್ನು ಹಿಂಪಡೆಯಬೇಕು ಎಂದರು