ಹನೂರು: ಬಂಡಳ್ಳಿಯ ಪರಮಪೂಜ್ಯ ಫಲಹಾರ ಪ್ರಭುದೇವ ಸ್ವಾಮೀಜಿಯವರು ಹೃದಯಘಾತದಿಂದ ಲಿಂಗೈಕ್ಯ
ಹನೂರು: ಎಂಟಳ್ಳಿ ಗ್ರಾಮಗಳ ಪೀಠವಾದ ಬಂಡಳ್ಳಿ ಗ್ರಾಮದ ದೊಡ್ಡ ಮಠದ ಪೀಠಾದಿಪತಿಗಳು, ಪರಮಪೂಜ್ಯ ಶ್ರೀಶ್ರೀಶ್ರೀ ಫಲಹಾರ ಪ್ರಭುದೇವ ಸ್ವಾಮೀಜಿಯವರು, ಭಾನುವಾರ ರಾತ್ರಿ 11ರಲ್ಲಿ ಹೃದಯಾಘಾತದಿಂದ ಲಿಂಗೈಕ್ಯರಾದರು. ಶ್ರೀಗಳು ಬಂಡಳ್ಳಿ ವ್ಯಾಪ್ತಿಯ ಕೆಲ ಮನೆಗಳಲ್ಲಿ ಪೂಜಾ ಕಾರ್ಯಕ್ರಮದ ನಿಮಿತ್ತ ತೆರಳಿದ್ದ ಸಂದರ್ಭದಲ್ಲಿ, ಪೂಜೆಯಲ್ಲಿ ತಲ್ಲೀನರಾಗಿದ್ದಾಗ, ಅಚಾನಕ್ ಆಗಿ ಹೃದಯಾಘಾತ ಸಂಭವಿಸಿತು. ತಕ್ಷಣವೇ ಸೂಕ್ತ ಚಿಕಿತ್ಸೆ ಕೊಡಿಸಲು ಪ್ರಯತ್ನಿಸಿದರೂ ಕೂಡ, ಅವರು ಅಸುನೀಗಿದರು. ಪರಮಪೂಜ್ಯರು ಅಪಾರ ಭಕ್ತರನ್ನು ಹೊಂದಿದ್ದರು ಅಲ್ಲದೆ. ಈ ಭಾಗದ ಜನತೆಗೆ ಅವರು ನಡೆಯುವ ದೇವರು ಎನಿಸಿಕೊಂಡಿದ್ದರು. ವಿಶೇಷವಾಗಿ ಎಂಟಳ್ಳಿ ಭಾಗದ ಆರಾಧ್ಯ ದೈವವಾಗಿ ಅವರು ಜನಮನದಲ್ಲಿ ಬೇರೂರಿದ್ದರು.