ಖಾನಾಪುರ: ಹಂದೂರ ಗ್ರಾಮದಲ್ಲಿ ಮನೆ ಮುಂದೆ ನಿಲ್ಲಿಸಿದ ಬೈಕಗಳಿಗೆ ಬೆಂಕಿ ಇಟ್ಟ ದುಷ್ಕರ್ಮಿಗಳು
ಬೆಳಗಾವಿ ಜಿಲ್ಲೆಯ ಖಾನಾಪೂರ ತಾಲೂಕಿನ ಹಂದೂರ ಗ್ರಾಮದಲ್ಲಿ ಮಂಗಳವಾರ ತಡರಾತ್ರಿ 11:50 ಕ್ಕೆ ನಡೆದ ಘಟನೆ ಆಗಿದ್ದು ಮನೆ ಮುಂದೆ ನಿಲ್ಲಿಸಿದ ಎರಡು ಬೈಕಗಳಿಗೆ ಬೆಂಕಿ ಇಟ್ಟ ಪರಿಣಾಮ ಸುಟ್ಟು ಕರಕಲಾಗಿವೆ ಹಂದೂರ ಗ್ರಾಮದ ಸದ್ದಾಮ್ ಸಯ್ಯದ ಎನ್ನುವವರಿಗೆ ಸೇರಿದ ದ್ವಿಚಕ್ರ ವಾಹನಗಳಾಗಿದ್ದು ಹೋಂಡಾ ಮತ್ತು ಸುಜುಕಿ ಎನ್ನುವ ಎರಡು ಬೈಕಗಳು ಸುಟ್ಟು ಭಸ್ಮ ಆಗಿವೆ ಅದೃಷ್ಟವಶಾತ್ ಮನೆಗೆ ಬೆಂಕಿ ಹತ್ತದೆ ಇದ್ದಿದ್ದರಿಂದ ತಪ್ಪಿದ ಭಾರಿ ಅನಾಹುತ ಬೈಕ್ ಬೆಂಕಿ ಇಟ್ಟ ಕಿಡಿಗೇಡಿಗಳ ಮೇಲೆ ಕ್ರಮಕ್ಕೆ ಕುಟುಂಬಸ್ಥರು ಆಗ್ರಹಿಸಿದ್ದು ಸ್ಥಳಕ್ಕೆ ಪೊಲೀಸರ ಭೇಟಿ ನೀಡಿ ಪರಿಶೀಲನೆ ಕೂಡಾ ನಡೆಸಿದ್ದು ನಂದಗಡ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ ಘಟನೆ ಆಗಿದೆ