ಚಿತ್ರದುರ್ಗದ ಕುಂಚಿಗನಹಾಳ್ ಬಳಿ ಟ್ಯಾಂಕರ್ ಲಾರಿಗಳಲ್ಲಿ ಕೆಮಿಕಲ್ ಮಿಶ್ರಿತ ವೇಸ್ಟ್ ನೀರನ್ನ ತಂದು ಸುರಿಯುತ್ತಿದ್ದ ಘಟನೆ ಬೆಳಕಿಗೆ ಬಂದಿದೆ. ಇನ್ನೂ ಬುದವಾರ ಸಂಜೆ 5 ಗಂಟೆಗೆ ಈ ಒಂದು ಘಟನೆ ಬೆಳಕಿಗೆ ಬಂದಿದ್ದು ಸ್ಥಳೀಯರು ಇದನ್ನ ಗಮನಿಸಿ ವೀಡಿಯೋ ಮಾಡುವ ಮೂಲಕ ಟ್ಯಾಂಕರ್ ಲಾರಿ ಚಾಲಕರಿಗೆ ಪ್ರಷ್ನೆ ಮಾಡಿದ್ದಾರೆ. ಇನ್ನೂ ಕಳೆದ ಹಲವು ದಿನಗಳಿಂದ ಇದೇ ರೀತಿ ಕುಂಚಿಗನಹಾಳ್ ಬಳಿಯ ಜೈ ಹಿಂದ್ ಹೋಟೆಲ್ ಬಲಿಯ ಅಶೋಕ್ ಲೇಲ್ಯಾಂಡ್ ಗ್ಯಾರೇಜ್ ಬಳಿ ಲಾರಿಗಳನ್ನ ನಿಲ್ಲಿಸಿಕೊಂಡು ರಸ್ತೆ ಬದಿಗಳಲ್ಲಿ ಕೈಗಾರಿಕಾ ಪ್ರದೇಶಗಳಿಂದ ಹೊರ ಹಾಕುವ ಕೆಮಿಕಲ್ ಮಿಶ್ರಿತ ನೀರನ್ನ ತಂದು ಹಾಕುತ್ತಿರುವ ಬಗ್ಗೆ ಆರೋಪಗಳನ್ನ ಸ್ಥಳೀಯರು ಮಾಡುತ್ತಿದ್ದಾರೆ.