ಶಿರಸಿ: ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ನಗರಕ್ಕೆ ಭೇಟಿ
ಕನ್ನಡ ಸಿನಿರಂಗದ ಖ್ಯಾತ ನಟ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅವರು ಪತ್ನಿ ಗೀತಾ ಶಿವರಾಜ್ ಕುಮಾರ್ ಶುಕ್ರವಾರ ಸಂಜೆ 3.30ಕ್ಕೆ ಶಿರಸಿ ನಗರದ ಪ್ರಸಿದ್ಧ ಶ್ರೀ ಮಾರಿಕಾಂಬಾ ದೇವಾಲಯಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದರು. ನಾಡದೇವಿ ಶ್ರೀ ಮಾರಿಕಾಂಬಾ ದೇವಿಯ ಅಪ್ಪಟ ಭಕ್ತರಾಗಿರುವ ಶಿವರಾಜ್ ಕುಮಾರ್ ದಂಪತಿಗಳು ದೇವಿಯ ದರ್ಶನ ಪಡೆದು ಆಶೀರ್ವಾದ ಕೋರಿದರು. ಬಳಿಕ ಅವರು ಶಾಲ್ಮಲಾ ನದಿಯ ಸಹಸ್ರಲಿಂಗಕ್ಕೆ ತೆರಳಿ ಪೂಜೆ ಸಲ್ಲಿಸಿದರು.