ಸಿರಗುಪ್ಪ: ಇದು ರಸ್ತೆಯೋ..? ಹಳ್ಳವೋ..?ಸಿರಿಗೇರಿ ಗ್ರಾಮದ 3ನೇ ವಾರ್ಡ್‌ನ ದುಸ್ಥಿತಿ
ಅ.21, ಮಂಗಳವಾರ ಮಧ್ಯಾಹ್ನ 3:30ಕ್ಕೆ ಮಳೆ ಬಂದರೆ ಸಿರಿಗೇರಿ ಗ್ರಾಮದ 3ನೇ ವಾರ್ಡ್‌ನ ನಿವಾಸಿಗಳು ನರಕದ ಜೀವನಕ್ಕೆ ಒಳಗಾಗುತ್ತಿದ್ದಾರೆ. ಕೆರೆ ನೀರು ಹಾಗೂ ಚರಂಡಿ ನೀರು ಮನೆಗಳೊಳಗೆ ನುಗ್ಗಿ ಜನರ ಬದುಕು ಕಷ್ಟಪಡಿಸಿದೆ. ತಾಯಿ ಮಗ ಜೀವವನ್ನು ಕೈಯಲ್ಲಿ ಹಿಡಿದುಕೊಂಡು ನೀರಿನ ಮಧ್ಯೆ ಸಾಗುವ ದೃಶ್ಯ ಮನಕಲುಕುವಂತಿತ್ತು. ಎಷ್ಟು ಬಾರಿ ಸಮಸ್ಯೆಯನ್ನು ಆಡಳಿತದ ಗಮನಕ್ಕೆ ತಂದರೂ ಕೂಡ ಪರಿಹಾರ ಕಾಣದಂತಾಗಿದೆ.