ಹುಮ್ನಾಬಾದ್: ನಗರದಲ್ಲಿ ಲಹೂಜಿ ಶಕ್ತಿ ಸೇನಾ ತಾಲೂಕು ಪದಾಧಿಕಾರಿಗಳ ಆಯ್ಕೆ ಸಂಬಂಧ ಪೂರ್ವಭಾವಿ ಸಭೆ
Homnabad, Bidar | Oct 22, 2025 ನಗರದಲ್ಲಿ ಲಹೂಜಿ ಶಕ್ತಿ ಸೇನಾ ತಾಲೂಕು ಪದಾಧಿಕಾರಿಗಳ ಆಯ್ಕೆ ಸಂಬಂಧ ಬುಧವಾರ ಸಂಜೆ 5:30ಕ್ಕೆ ನಗರದ ಪ್ರವಾಸಿ ಮಂದಿರದಲ್ಲಿ ಪೂರ್ವಭಾವಿ ಸಭೆ ನಡೆಸಲಾಯಿತು. ಹಿರಿಯ ಜೀವಿ ಅಶೋಕರಾಜ್ ಕಟ್ಟಿ ಅವರ ಅಧ್ಯಕ್ಷತೆಯಲ್ಲಿ ನಡೆದ ಪೂರ್ವಭಾವಿ ಸಭೆಯಲ್ಲಿ ಪದಾಧಿಕಾರಿಗಳ ಆಯ್ಕೆ ಸಂಬಂಧಪಟ್ಟ ಸುಧೀರ್ಘ ಚರ್ಚೆಯನ್ನ ನಡೆಸಲಾಯಿತು. ಈ ಸಂದರ್ಭದಲ್ಲಿ ಚಂದ್ರಪ್ರಕಾಶ, ದತ್ತು ಮುದನಾಳ, ಸಂದೀಪಕುಮಾರ್ ಭಾಗ್ಯಕರ್, ಭಾಸ್ಕರ್ ಭಾಗ್ಯಕರ್ ಮತ್ತಿತರರು ಇದ್ದರು.