ಮೊಳಕಾಲ್ಮುರು: ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ ವೇಳೆ ಜಾತಿಯ ಕಾಲಂನಲ್ಲಿ ಉಪಜಾತಿಯ ವಿವರ ನಮೂದಿಸಬಾರದು: ಪಟ್ಟಣದಲ್ಲಿ ವಿ.ಪ. ಸದಸ್ಯ ಡಿ.ಟಿ ಶ್ರೀನಿವಾಸ್
ಮೊಳಕಾಲ್ಮುರು:-ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ ವೇಳೆ ಜಾತಿಯ ಕಾಲಂನಲ್ಲಿ ಯಾವುದೆ ಕಾರಣಕ್ಕೂ ಉಪಜಾತಿಯ -ವಿವರವನ್ನು ನಮೂದಿಸಬಾರದು. ಒಂದು ಡಿ.ಟಿ. ವೇಳೆ ಹಾಗೆ ಬರೆಸಿದರೆ ಈ ಹಿಂದಿನ ಶ್ರೀನಿವಾಸ್ ಸಮೀಕ್ಷೆಯ ವರದಿಯಂತೆ ಸಮುದಾಯದ ಜನಸಂಖ್ಯೆಯ ಬಗ್ಗೆ ಸ್ಪಷ್ಟತೆ ದೊರೆಯುವುದಿಲ್ಲ' ಎಂದು ಕರ್ನಾಟಕ ರಾಜ್ಯ ಪ್ರವರ್ಗ-1ರ ಜಾತಿಗಳ ಒಕ್ಕೂಟದ ಅಧ್ಯಕ್ಷ, -ವಿಧಾನಪರಿಷತ್ ಸದಸ್ಯ ಡಿ.ಟಿ. ಶ್ರೀನಿವಾಸ್ ತಿಳಿಸಿದರು. ಪಟ್ಟಣದಲ್ಲಿ ಈ ಬಗ್ಗೆ ಮಾತನಾಡಿದ ಅವರು,'ಗೊಲ್ಲ ಜಾತಿಯಲ್ಲಿ ಅನೇಕ ಉಪಜಾತಿಗಳನ್ನು ನಮೂ-ದಿಸಲಾಗಿರುತ್ತದೆ. ಆದರೆ, ಮುಖ್ಯವಾದ ಜಾತಿ ಯಾವುದೆಂದು -ಮನಗಂಡು, ಗೊಲ್ಲ ಎಂಬ ಜಾತಿಯನ್ನು ಮಾತ್ರ ಬರೆಸಬೇಕಿದೆ ಎಂದರು.