ಹೊಸನಗರ: ಆಶ್ರಯ ಮನೆಗಳಿಗೆ ವಿದ್ಯುತ್ ಎನ್ ಓ ಸಿ ನೀಡುವಂತೆ ಒತ್ತಾಯಿಸಿ ಹೊಸನಗರದಲ್ಲಿ ಪ್ರತಿಭಟನೆ
ಆಶ್ರಯ ಮನೆಗಳಿಗೆ ವಿದ್ಯುತ್ ಎನ್ ಓಸಿ ನೀಡುವಂತೆ ಒತ್ತಾಯಿಸಿ, ಹೊಸನಗರ ತಾಲೂಕು ಕಚೇರಿ ಮುಂಭಾಗ ಸೋಮವಾರ ಸಾಮಾಜಿಕ ಹೋರಾಟಗಾರ ಕರುಣಾಕರ್ ಶೆಟ್ಟಿಯವರು ಪ್ರತಿಭಟನೆಯನ್ನು ನಡೆಸಿದ್ದಾರೆ. ಹೊಸನಗರ ತಾಲೂಕಿನ ಗ್ರಾಮಗಳಲ್ಲಿ ಆಶ್ರಯ ಮನೆಗಳನ್ನು ನಿರ್ಮಿಸಿ ಕೊಡಲಾಗಿದೆ. ಆದರೆ ಆಶ್ರಯ ಮನೆಗಳ ಫಲಾನುಭವಿಗಳಿಗೆ ಎನ್ ಓಸಿ ನೀಡದೆ ಅಧಿಕಾರಿಗಳು ಹಲವು ಕಾರಣ ನೀಡುತ್ತಿದ್ದಾರೆ ಎಂದು ಆರೋಪಿಸಿ ಕರುಣಾಕರ್ ಶೆಟ್ಟಿ ಅವರು ತಾಲೂಕು ಕಚೇರಿ ಮುಂಭಾಗ ಮಲಗಿ ಏಕಾಂಗಿ ಪ್ರತಿಭಟನೆಯನ್ನು ನಡೆಸಿದರು.