ಗದಗ: ನಗರದಲ್ಲಿ ಬಿಜೆಪಿಯಿಂದ ಜಿಎಸ್ಟಿ ಇಳಿಕೆಯ ಬಗ್ಗೆ ಸಾರ್ವಜನಿಕರಿಗೆ, ವ್ಯಾಪಾರಸ್ಥರಿಗೆ ಜಾಗೃತಿ ಕಾರ್ಯಕ್ರಮ
Gadag, Gadag | Sep 28, 2025 ಪ್ರಧಾನ ಮಂತ್ರಿ ನರೇಂದ್ರ ಮೋದಿಜಿ ಅವರ ಐತಿಹಾಸಿಕ ನಿರ್ಧಾರದಿಂದ ಜಿಎಸ್ಟಿ ಇಳಿಕೆಯ ಕೊಡುಗೆಯನ್ನು ಸಾರ್ವಜನಿಕರಿಗೆ ಮತ್ತು ವ್ಯಾಪಾರಸ್ಥರಿಗೆ ಜಿ.ಎಸ್.ಟಿ ಜಾಗೃತಿ ಕಾರ್ಯಕ್ರಮವನ್ನು ಜಿಲ್ಲಾ ಬಿಜೆಪಿಯಿಂದ ಹಮ್ಮಿಕೋಳ್ಳಲಾಗಿತ್ತು. ನಗರದ ಟಾಂಗಕೋಟ್ ನಲ್ಲಿರುವ ಅಂಗಡಿಗಳಿಗೆ ಭೇಟಿ ನೀಡಿ ವ್ಯಾಪಾರಸ್ಥರ ಹಾಗೂ ಸಾರ್ವಜನಿಕರ ಅಭಿಪ್ರಾಯ ಸಂಗ್ರಹ ಮಾಡಲಾಯಿತು. ಸರ್ಕಾರವು ಹಲವು ಉತ್ಪನ್ನಗಳ ಮೇಲಿನ ಜಿ.ಎಸ್.ಟಿ (ಸರಕು ಮತ್ತು ಸೇವಾ ತೆರಿಗೆ) ದರಗಳನ್ನು ಇಳಿಸಿರುವ ಹಿನ್ನೆಲೆಯಲ್ಲಿ, ವ್ಯಾಪಾರಿಗಳೊಂದಿಗೆ ನೇರವಾಗಿ ಸಂವಾದವನ್ನು ನಡೆಸಲಾಯಿತು.