ಕದ್ರಾ ನಿವಾಸಿ ರಿಶೇಲ್ ಕಿತ್ತೋದ ಡಿಸೋಜಾ ಅವರ ನಿಗೂಢ ಆತ್ಮಹತ್ಯೆ ಪ್ರಕರಣವು ಈಗ ಹೊಸ ತಿರುವು ಪಡೆದುಕೊಂಡಿದೆ. ಮಗಳ ಸಾವಿನ ಬಗ್ಗೆ ಸಂಶಯ ವ್ಯಕ್ತಪಡಿಸಿರುವ ಆಕೆಯ ತಾಯಿ ರೀನಾ ಡಿಸೋಜಾ ಹೂತಿಟ್ಟಿರುವ ಮೃತದೇಹವನ್ನು ಹೊರತೆಗೆದು ಮರು ಮರಣೋತ್ತರ ಪರೀಕ್ಷೆ ನಡೆಸುವಂತೆ ಕದ್ರಾ ಪೊಲೀಸ್ ವೃತ್ತ ನಿರೀಕ್ಷಕರಿಗೆ ಶುಕ್ರವಾರ ಸಂಜೆ 4.30 ರ ಸುಮಾರು ಮನವಿ ಸಲ್ಲಿಸಿದ್ದಾರೆ.