ದಾಂಡೇಲಿ : ಹಿಂದೂ ಸಮಾವೇಶ ಸಮಿತಿ ಶ್ರೀ ಸಾಯಿ ಉಪನಗರ ಇವರ ಆಶ್ರಯದಲ್ಲಿ ದಾಂಡೇಲಿಯ ಸುದರ್ಶನ ನಗರದ ಶ್ರೀ ಗಣಪತಿ ಪೆಂಡಾಲಿನಲ್ಲಿ ಭಾನುವಾರ ಸಂಜೆ 5:00 ಗಂಟೆ ಸುಮಾರಿಗೆ ಹಿಂದೂ ಸಮಾವೇಶ ಕಾರ್ಯಕ್ರಮವು ಯಶಸ್ವಿಯಾಗಿ ಜರುಗಿತು. ಸಮಾವೇಶಕ್ಕೂ ಮುನ್ನ ಮೆರವಣಿಗೆಯನ್ನು ಹಮ್ಮಿಕೊಳ್ಳಲಾಗಿತ್ತು. ನಂತರ ನಡೆದ ಉಪನ್ಯಾಸ ಕಾರ್ಯಕ್ರಮದಲ್ಲಿ ಮುಖ್ಯ ವಕ್ತಾರರಾಗಿ ಭಾಗವಹಿಸಿದ್ದ ಹೊಸಪೇಟೆಯ ಗ್ರಾಮ ವಿಕಾಸ ಕೇಂದ್ರದ ಅಧ್ಯಕ್ಷ ರಾಜಶೇಖರ.ಜಿ ಅವರು ಸನಾತನ ಹಿಂದೂ ಧರ್ಮ ಸಂಸ್ಕೃತಿಯನ್ನು ಉಳಿಸಿ ಬೆಳೆಸುವ ಗುರುತರವಾದ ಜವಾಬ್ದಾರಿ ನಮ್ಮ ನಿಮ್ಮೆಲ್ಲರ ಮೇಲಿದೆ ಎಂದರು.