ಬೆಂಗಳೂರು ಉತ್ತರ: ಗುಂಡಿಗಳಿಗೆ ಹೋಮ ಹವನ; ಸರ್ಕಾರವನ್ನು ಅಣಕಿಸಿದ ಬೆಂಗಳೂರಿನ ಭಾರತೀನಗರ ನಿವಾಸಿಗಳು
ಬೆಂಗಳೂರಿನಲ್ಲೀಗ ಗುಂಡಿಗಳದ್ದೇ ಸುದ್ದಿ. ಸರ್ಕಾರ, ಕೋಟಿ ಕೋಟಿ ಹಣ ವ್ಯಯಿಸಿ, ಗುಂಡಿ ಮುಚ್ಚುವ ಕೆಲಸದಲ್ಲಿ ನಿರತವಾಗಿದೆ. ಈ ನಡುವೆ ರೋಸಿಹೋಗಿರುವ ನಗರದ ಭಾರತೀನಗರದ ನಿವಾಸಿಗಳು, ಶನಿವಾರ ಮಧ್ಯಾಹ್ನ ೧೧ ಗಂಟೆ ಸುಮಾರಿಗೆ ರಸ್ತೆಯಲ್ಲಿನ ಗುಂಡಿಗೆ ಅರ್ಚಕರನ್ನು ಕರೆಸಿ, ಹೋಮ ಹವನ ಹಾಕಿ, ಪೂಜೆ ಮಾಡಿದ್ದಾರೆ. ಗುಂಡಿಯನ್ನು ಹೂವಿನಿಂದ ಸಿಂಗರಿಸಿ, ಸ್ಥಳೀಯರೇ ಆ ಗುಂಡಿಯನ್ನು ಮುಚ್ಚಿ ತಮ್ಮ ಆಕ್ರೋಶ ಹೊರಹಾಕಿದ್ದಾರೆ. ಸದ್ಯ ಸೋಷಿಯಲ್ ಮೀಡಿಯಾದಲ್ಲಿ ಈ ವಿಡಿಯೋ ವೈರಲ್ ಆಗುತ್ತದೆ.