ಗುಂಡ್ಲುಪೇಟೆ: ಬಂಡೀಪುರದಲ್ಲಿ ಪ್ರವಾಸಿಗರ ಮುಂದೆ ಕೆರೆಗಿಳಿದು ರಿಲಾಕ್ಸ್ ಗೆ ಜಾರಿದ ಹುಲಿ- ವೀಡಿಯೋ ಸಖತ್ ವೈರಲ್
ದೇಶದ ಜನಪ್ರಿಯ ಹುಲಿ ರಕ್ಷಿತಾರಣ್ಯದಲ್ಲಿ ಒಂದಾದ ಗುಂಡ್ಲುಪೇಟೆ ತಾಲೂಕಿನ ಬಂಡೀಪುರದಲ್ಲಿ ಪ್ರವಾಸಿಗರಿಗೆ ಹುಲಿಯು ದರ್ಶನ ಕೊಟ್ಟು ಎಲ್ಲರನ್ನೂ ಪುಳಕಿತಗೊಳಿಸಿದ ಘಟನೆ ನಡೆದಿದೆ. ಬಂಡೀಪುರದ ಸಫಾರಿ ವಲಯದ ಅಟ್ಟಿಗಟ್ಟೆ ಎಂಬಲ್ಲಿ ಹುಲಿಯೊಂದು ಪ್ರವಾಸಿಗರ ಮುಂದೆ ಕೆರೆಗಿಳಿದು ರಿಲಾಕ್ಸ್ ಗೆ ಜಾರಿದೆ. ಹುಲಿಯ ವಿರಮಿಸುತ್ತಿದ್ದನ್ನು ಕಂಡ ಪ್ರವಾಸಿಗರು ರೋಮಾಂಚಿತರಾಗಿದ್ದು ವೀಡಿಯೋವನ್ನು ಮೊಬೈಲ್ ಕ್ಯಾಮರಾದಲ್ಲಿ ಸೆರೆ ಹಿಡಿದಿದ್ದಾರೆ. ಬಂಡೀಪುರದ ಹುಲಿಯ ರಿಲಾಕ್ಸ್ ಮೂಡ್ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ಲಾಗುತ್ತಿದೆ.