ದಾಂಡೇಲಿ : ನಗರದ ಬರ್ಚಿ ರಸ್ತೆಯಲ್ಲಿ ದ್ವಿಚಕ್ರ ವಾಹನದ ಮೂಲಕ ಅಕ್ರಮವಾಗಿ ಕಾಡುಪ್ರಾಣಿಯ ಮಾಂಸ ಸಾಗಾಟ ಮಾಡುತ್ತಿದ್ದ ವ್ಯಕ್ತಿಯನ್ನು ಬಂಧಿಸಿ, ಮಾಲು ಸಹಿತ ದ್ವಿಚಕ್ರ ವಾಹನವನ್ನು ಅರಣ್ಯ ಇಲಾಖೆಯ ಅಧಿಕಾರಿಗಳು ಮತ್ತು ಸಿಬ್ಬಂದಿಗಳ ತಂಡ ವಶಪಡಿಸಿಕೊಂಡಿರುವ ಬಗ್ಗೆ ಇಂದು ಗುರುವಾರ ಮಧ್ಯಾಹ್ನ 12:00 ಗಂಟೆ ಸುಮಾರಿಗೆ ಮಾಧ್ಯಮಕ್ಕೆ ಮಾಹಿತಿ ಲಭ್ಯವಾಗಿದೆ. ಗ್ರಾಮೀಣ ಪೋಲಿಸ್ ವಸತಿ ಗೃಹದ ಹತ್ತಿರ ಬರ್ಚಿ ರಸ್ತೆಯಲ್ಲಿ ಅಕ್ರಮವಾಗಿ ಕಾಡುಪ್ರಾಣಿಯ ಮಾಂಸವನ್ನು ತಾಲೂಕಿನ ಕೆರವಾಡದ ನಿವಾಸಿ ರಾಜು ಮಂಜು ಪೋತದಾರ ಎಂಬಾತನು ತಮ್ಮ ದ್ವಿಚಕ್ರ ವಾಹನದಲ್ಲಿ ಸಾಗಾಟ ಮಾಡುತ್ತಿದ್ದ ಸಂದರ್ಭದಲ್ಲಿ ಅರಣ್ಯ ಇಲಾಖೆಯ ಅಧಿಕಾರಿಗಳ ಮತ್ತು ಸಿಬ್ಬಂದಿಗಳ ತಂಡ, ಈತನನ್ನು ತಡೆದು ಪರಿಶೀಲನೆ ನಡೆಸಿ ವಶಪಡಿಸಿ, ಆರೋಪಿಯನ್ನು ಬಂಧಿಸಿದ್ದಾರೆ.