ರಾಯಚೂರು: ಖಾಲಿ ಕೊಡ ಹಿಡಿದು ಪಿಡಿಓ ಅಧಿಕಾರಿಗೆ ಎಚ್ಚರಿಕೆ ನೀಡಿದ ಮರ್ಚೆಡ್ ಗ್ರಾಮಸ್ಥರು
ರಾಯಚೂರು ತಾಲೂಕಿನ ಮರ್ಚೆಡ್ ಗ್ರಾಮದಲ್ಲಿ ನೀರಿನ ಸಮಸ್ಯೆ ಬಗೆಹರಿಸಲು ಕಳೆದ ಆರು ತಿಂಗಳುಗಳಿಂದ ಗ್ರಾಮ ಪಂಚಾಯತಿ ಪಿ.ಡಿ.ಒ ಹಾಗೂ ತಾಲೂಕ ಪಂಚಾಯತಿ ಇ.ಒ ರವರ ಗಮನಕ್ಕೆ ತಂದರೂ ಪ್ರಯೋಜನ ಆಗದ ಕಾರಣ ಗ್ರಾಮಸ್ಥರು ಜುಲೈ 14 ರ ಸೋಮವಾರ ಮಧ್ಯಾಹ್ನ 3 ಗಂಟೆ ಸುಮಾರಿಗೆ ಖಾಲಿ ಕೊಡಗಳನ್ನು ಹಿಡಿದು ಗ್ರಾಮ ಪಂಚಾಯತಿ ಮುಂದೆ ಧರಣಿ ನಡೆಸಿದರು. ಮುಖಂಡರಾದ ಮುಜಾಹಿದ್ ಮರ್ಚೆಡ್ ಮಾತನಾಡಿ, ಒಂದು ವಾರದಲ್ಲಿ ಕುಡಿವ ನೀರು ಕೊಡದಿದ್ರೆ ಗ್ರಾಮ ಪಂಚಾಯತಿಗೆ ಬೀಗ ಹಾಕಿ ಧರಣಿ ನಡೆಸುವುದಾಗಿ ಎಚ್ಚರಿಕೆ ನೀಡಿದರು.