ಚಿತ್ರದುರ್ಗ: ಪಂಚಮಸಾಲಿ ಮಠಗಳ ಸ್ವಾಮೀಜಿಗಳ ಹೇಳಿಕೆ ಮಾತ್ರ ಭಕ್ತರು ಪರಿಗಣಿಸಿ: ಚಿತ್ರದುರ್ಗದಲ್ಲಿ ವಚನಾನಂದ ಸ್ವಾಮೀಜಿ ಹೇಳಿಕೆ
ಚಿತ್ರದುರ್ಗದ ಬೋವಿ ಗುರುಪೀಠದಲ್ಲಿ ಹರಿಹರ ಪಂಚಮಸಾಲಿ ಮಠದ ವಚನಾನಂದ ಸ್ವಾಮೀಜಿ ಮಂಗಳವಾರ ಮಧ್ಯಾಹ್ನ 1 ಗಂಟೆಗೆ ಸುದ್ದಿಗೋಷ್ಠಿ ನಡೆಸಿದರು. ಈ ವೇಳೆ ಮಾತ್ನಾಡಿದ ಅವರು ಆಸೆ ಆಮಿಷಗಳಿಗೆ ಕೆಲವರು ಮತಾಂತರ ಆಗುತ್ತಿದ್ದಾರೆ. ಹಿಂದೂ ಧರ್ಮದಲ್ಲಿ ಎಲ್ಲವೂ ಸಿಗುತ್ತಿದ್ದು, ಹಿಂದೂ ಧರ್ಮ ನಮಗೆ ಬೇಕು ಎಂದರು. ಅಲ್ಲದೆ ಕರ್ನಾಟಕದ ಪಂಚಮಸಾಲಿ ಭಕ್ತರು, ಪಂಚಮಸಾಲಿ ಮಠಗಳ ಕಾರ್ಯಕ್ರಮಕ್ಕೆ ಮಾತ್ರ ಹೋಗಿ ಎಂದು ಕರೆ ನೀಡಿದರು. ಜಾತಿ ಸಮೀಕ್ಷೆ ವಿಚಾರದಲ್ಲಿ ಯಾವುದೇ ಬೇರೆ ಸ್ವಾಮೀಜಿಗಳ ಹೇಳಿಕೆ ಸ್ವೀಕಾರ ಮಾಡಬೇಡಿ, ಪಂಚಮಸಾಲಿ ಪೀಠದ ಗುರುಗಳ ಹೇಳಿಕೆಗಳನ್ನ ಮಾತ್ರ ಪಾಲೋ ಮಾಡಿ ಎಂದು ಕರೆ ನೀಡಿದರು.