ಬೆಂಗಳೂರು ಉತ್ತರ: ಪಟಾಕಿ ಸಿಡಿಸುವ ಮುನ್ನ ಹುಷಾರ್! ನಗರದಲ್ಲಿ ಕಣ್ಣು ಕಳೆದು ಕೊಂಡವರ ಸಂಖ್ಯೆ ನೋಡಿ! ಶಾಕ್ ಆಗಬೇಡಿ! ಪಟಾಕಿ ಸಿಡಿಸೋ ಮುನ್ನ ಈ ಸುದ್ದಿ ನೋಡಿ
ಅಕ್ಟೋಬರ್ 20 ಸಂಜೆ 7 ಗಂಟೆಯವರೆಗೆ ಲಭ್ಯ ಆದ ಮಾಹಿತಿ ಪ್ರಕಾರ ಒಟ್ಟು 7 ಮಂದಿ ಪಟಾಕಿ ಸಿಡಿಸಿ ಕಣ್ಣು ಪೆಟ್ಟು ಮಾಡಿ ಕೊಂಡಿದ್ದಾರೆ. ಮಿಂಟೋ ಆಸ್ಪತ್ರೆಯಲ್ಲಿ 4 ಮಂದಿ ಕಣ್ಣು ಗಾಯ ಮಾಡಿ ಕೊಂಡರೆ ನಾರಾಯಣ ನೇತ್ರಾಲಯದಲ್ಲಿ ಮೂವರು ಕಣ್ಣು ಗಾಯ ಮಾಡಿಕೊಂಡು ಆಸ್ಪತ್ರೆ ದಾಖಲು ಆಗಿದ್ದಾರೆ. ಇನ್ನೂ ಪಟಾಕಿ ಸಿಡಿಸುವವರು ಎಚ್ಚರಿಕೆ ವಹಿಸುವುದು ಅಗತ್ಯವಾಗಿದೆ.