ರಾಯಚೂರು: ಮಸ್ಕಿ ಪಟ್ಟಣದಲ್ಲಿ ಸುರಿವ ಮಳೆಯಲ್ಲಿಯೇ ಮನೆ ಮನೆಗೆ ಭೇಟಿ ನೀಡಿ ಜಾತಿವಾರು ಸಮೀಕ್ಷೆ ನಡೆಸಿದ ಅತಿಥಿ ಶಿಕ್ಷಕರು
ಮುಖ್ಯಮಂತ್ರಿಗಳು ಹಿಂದುಳಿದ ವರ್ಗಗಳ ಆಯೋಗದ ಜಾತಿವಾರು ಸಾಮಾಜಿಕ ಶೈಕ್ಷಣಿಕ ಮತ್ತು ಆರ್ಥಿಕ ಸಮೀಕ್ಷೆ ಅಂಗವಾಗಿ ಸಮೀಕ್ಷೆಯನ್ನು ಮುಗಿಸಿಕೊಡುವುದರ ಕುರಿತು ಈಗಾಗಲೇ ಗಡುವು ನೀಡಿದ್ದರ ಹಿನ್ನೆಲೆಯಲ್ಲಿ ಬುಧವಾರ ಮಸ್ಕಿ ಪಟ್ಟಣದಲ್ಲಿ ಶಿಕ್ಷಕರು ಮಳೆಯಲ್ಲಿಯೇ ಮನೆಗಳಿಗೆ ಭೇಟಿ ನೀಡಿ ಸಮೀಕ್ಷೆಯಲ್ಲಿ ಭಾಗವಹಿಸಿರುವುದು. ಅತಿಥಿ ಶಿಕ್ಷಕ ಸಿದ್ದಯ್ಯ ಸ್ವಾಮಿ ಹಿರೇಮಠ ಮಳೆಯ ಛತ್ರಿಯನ್ನು ಹಿಡಿದು ಮನೆ ಮನೆಗೆ ಭೇಟಿ ನೀಡಿ ಸಮೀಕ್ಷೆಯಲ್ಲಿ ಪಾಲ್ಗೊಂಡಿದ್ದು ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ.