ತಾಲೂಕಿನ ಇತಿಹಾಸ ಪ್ರಸಿದ್ಧ ಹಳ್ಳಿಖೇಡ್(ಬಿ)ಪಟ್ಟಣದ ಸೀಮಿ ನಾಗನಾಥ ದೇವರ ಜಾತ್ರೆ ಹಿನ್ನೆಲೆಯಲ್ಲಿ ಭಾನುವಾರ ಸಂಜೆ ಐದು ಮೂವತ್ತಕ್ಕೆ ಖ್ಯಾತ ಪೈಲ್ವಾನರಿಂದ ಪ್ರತಿ ವರ್ಷದಂತೆ ಈ ವರ್ಷವೂ ಜಂಗಿಕುಸ್ತಿ ಆಯೋಜಿಸಲಾಗಿತ್ತು. ಈ ವೇಳೆ ಕರ್ನಾಟಕ ಮಾತ್ರ ಅಲ್ಲದೆ ತೆಲಂಗಾಣ ಮಹಾರಾಷ್ಟ್ರ ಸೇರಿದಂತೆ ದೇಶದ ವಿವಿಧ ರಾಜ್ಯಗಳ ಖ್ಯಾತ ಪೈಲ್ವಾನರು ತಮ್ಮ ಸಾಹಸ ಪ್ರದರ್ಶಿಸಿ ಬಹುಮಾನ ವಿಜೇತರಾದರು. ಜಾತ್ರಾ ಉತ್ಸವ ಸಮಿತಿ ಅಧ್ಯಕ್ಷ, ಉಪಾಧ್ಯಕ್ಷ, ಪ್ರಧಾನ ಕಾರ್ಯದರ್ಶಿ, ಕೋಶ್ಯಾಧ್ಯಕ್ಷ ಸೇರಿದಂತೆ ಸರ್ವ ಸದಸ್ಯರು ಮತ್ತು ವ್ಯವಸ್ಥಾಪನ ಮಂಡಳಿಯ ಪ್ರಮುಖ ಪದಾಧಿಕಾರಿಗಳು, ಗಣ್ಯರು ಹಾಜರಿದ್ದರು.