ಹನೂರು: ಮಲೆಮಹದೇಶ್ವರ ವನ್ಯಧಾಮದಲ್ಲಿ ಶ್ರೀಗಂಧ ಕಳ್ಳಸಾಗಣೆ: ತಮಿಳುನಾಡಿನ ಇಬ್ಬರು ಬಂಧನ
ಮಲೆಮಹದೇಶ್ವರ ವನ್ಯಧಾಮದಲ್ಲಿ ಶ್ರೀಗಂಧದ ಮರ ಕಡಿದು ಸಾಗಿಸುತ್ತಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಒಂದೇ ದಿನದಲ್ಲಿ ಎರಡು ಪ್ರತ್ಯೇಕ ಪ್ರಕರಣಗಳಲ್ಲಿ ತಮಿಳುನಾಡಿನ ಇಬ್ಬರನ್ನು ಅರಣ್ಯಾಧಿಕಾರಿ-ಗಳು ಬಂಧಿಸಿದ್ದಾರೆ. ಪ್ರಕರಣ 1ರಲ್ಲಿ ಮಲೆ-ಮಹದೇಶ್ವರ ವನ್ಯಧಾಮದ ಕೊಕ್ಬೆರೆ ಗಸ್ತಿನ ದೊಡ್ಡಬರೆಹಳ್ಳದ ಸಮೀಪದ ಮೀಸಲು ಅರಣ್ಯ ಪ್ರದೇಶದಲ್ಲಿ ಒಬ್ಬ ಬಾಲಕ ಹಾಗೂ ಇಬ್ಬರು ವ್ಯಕ್ತಿಗಳು ಸೇರಿ ಶ್ರೀಗಂಧದ ಮರ ಕಡಿದು ಅದನ್ನು ಎರಡು ತುಂಡುಗಳನ್ನಾಗಿ ಮಾಡುತ್ತಿದ್ದಾಗ ಅರಣ್ಯ ಇಲಾಖೆ ಸಿಬ್ಬಂದಿ ದಾಳಿ ನಡೆಸಿದ್ದಾರೆ.. ಆತನಿಂದ 62 ಕೆ.ಜಿ ಶ್ರೀಗಂಧದ 02 ತುಂಡನ್ನು ವಶಪಡಿಸಿಕೊಳ್ಳಲಾಗಿದೆ. ಬಾಲಕನ್ನು ವಶ ಪಡೆದಿದ್ದಾರೆ ಪ್ರಕರಣ 2ರಲ್ಲಿ ಆನೆತಲೆದಿಂಬದಲ್ಲೂ ಸೇಡೆಯಾನ್ ಎಂಬಾತನನ್ನು ಬಂಧಿಸಿ ಗಂದದ ಮರ ತುಂಡನ್ನಿವಶಕ್ಕೆ ಪಡೆದಿದ್ದಾರೆ