ಸಂಡೂರು: ಪಟ್ಟಣದ 14ನೇ ವಾರ್ಡ್ ನಲ್ಲಿ ಮಕ್ಕಳು
ಸೇರಿ ಮೂವರ ಮೇಲೆ ಹುಚ್ಚು ನಾಯಿ ದಾಳಿ
Sandur, Ballari | Oct 16, 2025 ಜಿಲ್ಲೆಯ ಸಂಡೂರುಪಟ್ಟಣದ 14 ವಾಡ್ರ್ನ ಹಳೆ ಚಪ್ಪರದಹಳ್ಳಿಯಲ್ಲಿ ಮಕ್ಕಳು ಸೇರಿ ಮೂವರ ಮೇಲೆ ಹುಚ್ಚು ನಾಯಿ ದಾಳಿ ನಡೆಸಿ ಗಾಯಗೊಳಿಸಿದ ಘಟನೆಬುಧುವಾರ ಸಂಜೆ ಜರುಗಿದೆ. 14ನೇ ವಾರ್ಡ್ ನಿವಾಸಿ ಮಾಜ್ತ್ (2), ಇಫ್ತ ರ್ಖಾನ್ (3), ನಾಗರಾಜ್ (50) ಮೂರು ಜನರು ಗಾಯಗೊಂಡ ವ್ಯಕ್ತಿಗಳಾಗಿದ್ದು, ವಾರ್ಡ್ನಲ್ಲಿ ಆಟವಾಡುತ್ತಿದ್ದ ಇಬ್ಬರು ಮಕ್ಕಳ ಮೇಲೆ ನಾಯಿಯು ಏಕಾಏಕಿ ದಾಳಿ ನಡೆಸಿದ್ದರಿಂದ ಮಕ್ಕಳ ತಲೆ, ಹೊಟ್ಟೆ ಇತರೆ ಭಾಗಗಳಲ್ಲಿ ಕಚ್ಚಿದೆ. ಮನೆಯ ಬಳಿ ಇರುವ ವ್ಯಕ್ತಿಯ ಮೇಲೆ ನಾಯಿ ದಾಳಿ ನಡೆಸಿ ತೊಡೆಯ ಭಾಗಗಕ್ಕೆ ಕಚ್ಚಿದೆ. ಮನೆಯ ಬಳಿ ಇರುವ ವ್ಯಕ್ತಿಯ ಮೇಲೆ ನಾಯಿ ದಾಳಿ ನಡೆಸಿ ತೊಡೆಯ ಭಾಗಗಕ್ಕೆ ಕಚ್ಚಿದೆ. ಮೂರು ಜನರು ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಮನೆಗೆ ತೆರಳಿದ್ದಾರೆ.