ಮಂಗಳೂರು: ಮುಲ್ಕಿಯಲ್ಲಿ ಸಂಭ್ರಮದ ಈದುಲ್ ಫಿತ್ರ್ ಹಬ್ಬ ಆಚರಣೆ
ಮುಸಲ್ಮಾನ್ ಬಂಧುಗಳ ಪವಿತ್ರ ಈದುಲ್ ಪಿತ್ರ್ ಹಬ್ಬವನ್ನು ಮುಲ್ಕಿ ಯಲ್ಲಿ ಸಂಭ್ರಮದಿಂದ ಆಚರಿಸಲಾಯಿತು. ಮುಸ್ಲಿಂ ಬಾಂಧವರು ಪರಿಸರದ ವಿವಿಧ ಮಸೀದಿಗಳಿಗೆ ತೆರಳಿ ವಿಶೇಷ ಪ್ರಾರ್ಥನೆ ಸಲ್ಲಿಸಿದರು. ಮುಲ್ಕಿ ಕೇಂದ್ರ ಶಾಪಿ ಜುಮ್ಮಾ ಮಸೀದಿಯಲ್ಲಿ ಹಬ್ಬದ ಪ್ರಯುಕ್ತ ಮಸೀದಿಯ ಧರ್ಮ ಗುರುಗಳಾದ ಸಲೀಂ ಫೈಜಿ ಇರ್ಪಾಣಿ ಅವರಿಂದ ವಿಶೇಷ ಪ್ರಾರ್ಥನೆ ನಡೆಸಿ ಬಂದುತ್ವದ ಮೂಲಕ ಲೋಕದಲ್ಲಿ ಸುಖ ಶಾಂತಿ ನೆಮ್ಮದಿ ನೆಲೆಸಿದೆ ಎಂದು ಆಶೀರ್ವಚನ ಮಾಡಿದರು.