ಆಳಂದ: ಪಟ್ಟಣದಲ್ಲಿ ಅದ್ಧೂರಿ ಬಣ್ಣದೋಕುಳಿ
ಹೋಳಿ ಹಬ್ಬ ಹಿನ್ನೆಲೆಯಲ್ಲಿ ಸೋಮವಾರ ಆಳಂದ ಪಟ್ಟಣದಲ್ಲಿ ಸಡಗರ ಸಂಭ್ರಮದಿಂದ ಬಣ್ಣದೋಕುಳಿ ನಡೆಯಿತು. ಯುವ ಜನತೆ ಕುಣಿದು ಕುಪ್ಪಳಿಸಿದರು. ರವಿವಾರ ರಾತ್ರಿ ಕಾಮ ದಹನ ನಡೆಸಿ ಇಂದು ಬೂದಿ ಸಂಗ್ರಹಿಸಿ ಹಬ್ಬವನ್ನು ಬಣ್ಣ ಎರಚುವ ಮೂಲಕ ಆಚರಿಸಲಾಯಿತು. ಯುವಕರು, ಮಕ್ಕಳು ಗುಂಪು ಕಟ್ಟಿಕೊಂಡು ಬಡಾವಣೆ ತುಂಬಾ ತಿರುಗಾಡಿ ಬಣ್ಣ ಎರಚಿ ಸಂಭ್ರಮಿಸಿದರು.