ಹಣ್ಮುಪಾಜಿ ಗೆಳೆಯರ ಬಳಗದ ವತಿಯಿಂದ ಇದೆ ನವೆಂಬರ್ 10ರಂದು ನಗರದ ಡಾ. ಚನ್ನಬಸವ ಪಟ್ಟದೇವರ ರಂಗಮಂದಿರದಲ್ಲಿ ಕರ್ನಾಟಕ ರಾಜ್ಯೋತ್ಸವ ಕಾರ್ಯಕ್ರಮ ನಡೆಯಲಿದೆ ಎಂದು ಆಯೋಜನ ಸಮಿತಿ ಪ್ರಮುಖ ಭೀಮರೆಡ್ಡಿ ಅವರು ತಿಳಿಸಿದರು. ರಾಜ್ಯೋತ್ಸವ ಆಚರಣೆ ಹಿನ್ನೆಲೆಯಲ್ಲಿ ಗುರುವಾರ ಸಂಜೆ ಐದು ಮೂವತ್ತಕ್ಕೆ ನಗರದಲ್ಲಿ ರಾಜ್ಯೋತ್ಸವ ಕಾರ್ಯಕ್ರಮದ ಬಿತ್ತಿ ಪತ್ರ ಬಿಡುಗಡೆಗೊಳಿಸಿ ಅವರು ಮಾತನಾಡಿದರು. ಅರವಿಂದ ಜೋಗಿರೆ, ಯುವರಾಜ್ ಐಹೊಳೆ, ಶ್ರೀಕಾಂತ್ ರೆಡ್ಡಿ ಎಣಕೂರೆ ಮತ್ತಿತರರು ಹಾಜರಿದ್ದರು.