ರಾಣೇಬೆನ್ನೂರು: ನಿಟ್ಟೂರು ಗ್ರಾಮದಲ್ಲಿ ಬ್ರಿಡ್ಜ್ ಕಂ ಬ್ಯಾರೇಜ್ ಗೆ ಅಳವಡಿಸಲು ಇಟ್ಟಿದ್ದ 33 ಗೇಟ್ ನಾಪತ್ತೆ; ಇಂಜನೀಯರ್ ಕಂಗಾಲು
ರಾಣೆಬೆನ್ನೂರು ತಾಲೂಕು ನಿಟ್ಟೂರು ಗ್ರಾಮದಲ್ಲಿ ಬ್ರಿಡ್ಜ್ ಕಂ ಬ್ಯಾರೇಜ್ ಗೆ ಅಳವಡಿಕೆ ಮಾಡಲು ಸಂಗ್ರಹಿಸಿ ಇಟ್ಟಿದ್ದ 33 ಕಬ್ಬಿಣದ ಗೆಟ್ ಗಳನ್ನ ಕಳ್ಳರು ಕಳ್ಳತನ ಮಾಡಿದ್ದಾರೆ. ಸುಮಾರು 3.96 ಲಕ್ಷ ರೂ.ಮೌಲ್ಯದ ಗೇಟುಗಳನ್ನು ಕಳ್ಳತನ ಮಾಡಿದ್ದಾರೆ ಎಂದು ಹಲಗೇರಿ ಪೊಲೀಸ್ ಠಾಣೆಯಲ್ಲಿ ಎಂಜನಿಯರ್ ಮಣಿಕಂಠ ಎಫ್ಐಆರ್ ದಾಖಲಿಸಿದ್ದಾರೆ.