ರಾಯಚೂರು: ರಾಯಚೂರು ಗ್ರಾಮೀಣ : ಹಿಂದೆ ಜೋಡೊ ಯಾತ್ರೆ ವೇಳೆ ಮಂತ್ರಾಲಯ ಮಠಕ್ಕೆ ಬಂದಿದ್ದೆ
ಮಠದಲ್ಲಿ ಭೂಮಿ ಪೂಜೆ ಕಾರ್ಯಕ್ರಮ ಇದೆ ಭಾಗವಹಿಸುತ್ತೇನೆ ಎಂದು ಮಂತ್ರಾಲಯದಲ್ಲಿ ರಾಘವೇಂದ್ರ ಸ್ವಾಮಿಗಳ ದರ್ಶನ ಪಡೆದು ಡಿಕೆಶಿ ಹೇಳಿದರು. ಈ ಹಿಂದೆ ಭಾರತ್ ಜೋಡೊ ಯಾತ್ರೆ ವೇಳೆ ಮಂತ್ರಾಲಯ ಮಠಕ್ಕೆ ಬಂದಿದ್ದೆ, ನಂತರ ಮತ್ತೊಮ್ಮೆ ರಾಯರ ಮಠಕ್ಕೆ ಬರಬೇಕು ಅನ್ನೋದು ಇತ್ತು, ಮಠದ ಶ್ರೀಗಳು ಮಠಕ್ಕೆ ಬರುವಂತೆ ಆಹ್ವಾನ ನೀಡಿದ್ದರು, ಈ ದಿನ ವಿಶೇಷವಾದ ದಿನ ದರ್ಶನಕ್ಕೆ ಬಂದಿದ್ದೇನೆ. ರಾಯರ ಮಠದ ಕಾರ್ಯಕ್ರಮದಲ್ಲಿ ಭಾಗಿಯಾಗುತ್ತಿದ್ದೇನೆ. ಎಲ್ಲರಿಗೆ , ನಾಡಿಗೆ ಒಳ್ಳೆಯದಾಗಲಿ ಅಂತ ಬೇಡಿಕೊಂಡಿದ್ದೇನೆ ಎಂದರು.