ಕಡೂರು: ಡಿಜೆ ನಿಷೇಧ ಹಿನ್ನೆಲೆ ಕಾರೆಹಳ್ಳಿಯಲ್ಲಿ ಸಾಂಪ್ರದಾಯಿಕ ವಾದ್ಯದ ಮೂಲಕ ಗಣೇಶ ವಿಸರ್ಜನೆ.! ಸಮಾಜಕ್ಕೆ ಮಾದರಿ ಕಾರ್ಯ.!
ಗಣೇಶ ವಿಸರ್ಜನೆ ವೇಳೆ ರಾಜ್ಯದ್ಯಂತ ಡಿಜೆ ನಿಷೇಧಿಸಿ ಸರ್ಕಾರ ಹೊರಡಿಸಿರುವ ಆದೇಶಕ್ಕೆ ಗೌರವ ಕೊಟ್ಟು ಸಾಂಪ್ರದಾಯಿಕ ವಾದ್ಯದ ಮೂಲಕ ಗಣಪತಿ ವಿಸರ್ಜನಾ ಮೆರವಣಿಗೆಯನ್ನ ಮಾಡಿ ಸಮಾಜಕ್ಕೆ ಮಾದರಿಯಾಗುವ ಕೆಲಸವನ್ನ ಮಾಡಲಾಗಿದೆ. ಚಿಕ್ಕಮಗಳೂರು ಜಿಲ್ಲೆಯ ಕಡೂರು ತಾಲೂಕಿನ ದೇವರ ಕಾರೆಹಳ್ಳಿ ಗ್ರಾಮದಲ್ಲಿ ಭಾನುವಾರ ಗಣಪತಿ ವಿಸರ್ಜನೆ ಹಿನ್ನೆಲೆಯಲ್ಲಿ ಸಾಂಪ್ರದಾಯಿಕ ವಾದ್ಯದ ಮೂಲಕ ಮೆರವಣಿಗೆ ಮಾಡಿ ಗಣಪತಿ ವಿಸರ್ಜನೆ ಮಾಡಿ ಸಮಾಜಕ್ಕೆ ಸ್ಪಷ್ಟ ಸಂದೇಶ ಹಾಗೂ ಮಾದರಿ ಕಾರ್ಯವನ್ನು ಮಾಡಿದ್ದಾರೆ.