ರಟ್ಟೀಹಳ್ಳಿ: ಮೊಬೈಲ್ ತೋರಿಸುತ್ತೇನೆ ಬಾ ಎಂದು ಕರೆದು ಅಪ್ರಾಪ್ತ ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಕಿರಾತಕ ಅಂದರ್; ಮಾಸೂರಿನಲ್ಲಿ ಘಟನೆ
ಮೊಬೈಲ್ ತೋರಿಸುತ್ತೇನೆ ಬಾ ಎಂದು ಅಪ್ರಾಪ್ತಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪಿಯೊಬ್ಬನ ವಿರುದ್ಧ ಹಿರೇಕೆರೂರು ಪೊಲೀಸ್ ಠಾಣೆಯಲ್ಲಿ ಫೋಕ್ಲೋ ಕೇಸ್ ನಡಿ ಪ್ರಕರಣ ದಾಖಲಾಗಿದೆ. ಹಾಸನ ಮೂಲದ ಗುರು ಎಂಬಾತನ ವಿರುದ್ದ ದೂರನ್ನು ದಾಖಲಿಸಲಾಗಿದೆ. ಆರೋಪಿ ರಟ್ಟಿಹಳ್ಳಿ ತಾಲೂಕು ಮಾಸೂರಿನ ಸ್ನೇಹಿತರೊಬ್ಬರ ಮನೆಗೆ ಬಂದಿದ್ದಾನೆ. ಈ ವೇಳೆ ಅಪ್ರಾಪ್ತಬಾಲಕಿ ಮನೆ ಎದುರು ಆಟವಾಡುತ್ತಿದ್ದಾಗ ಮೊಬೈಲ್ ತೋರಿಸುತ್ತೇನೆ ಬಾ ಎಂದು ಪುಸಲಾಯಿಸಿ ಶಿವಪ್ಪ ಮಾಗನೂರು ಎಂಬುವವರ ಮನೆಯೊಳಗೆ ಕರೆದುಕೊಂಡು ಹೋಗಿ ಬಾಲಕಿಗೆ ಮೊಬೈಲ್ ತೋರಿಸಿ ಲೈಂಗಿಕ ದೌರ್ಜನ್ಯವನ್ನು ಎಸಗಿದ್ದಾನೆ ಎಂದು ಬಾಲಕಿಯ ತಾಯಿ ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ. ಹಿರೇಕೆರೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.