ಸೂಪಾ: ನಗರಿ ಗ್ರಾಮದ ಹೊಲದಲ್ಲಿ ಕಾಣಿಸಿಕೊಂಡ ನಾಗರಹಾವು, ಅರಣ್ಯ ಅಧಿಕಾರಿಗಳಿಂದ ರಕ್ಷಣೆ
ಜೋಯಿಡಾ : ಹೊಲವೊಂದರಲ್ಲಿ ಕಾಣಿಸಿಕೊಂಡ ನಾಗರಹಾವನ್ನು ಅರಣ್ಯ ಇಲಾಖೆಯ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಸ್ಥಳೀಯರ ಸಹಕಾರದಲ್ಲಿ ರಕ್ಷಣೆ ಮಾಡಿದ ಘಟನೆ ಜೋಯಿಡಾ ತಾಲೂಕಿನ ನಗರಿ ಗ್ರಾಮದಲ್ಲಿ ಭಾನುವಾರ ಸಂಜೆ ನಾಲ್ಕು ಗಂಟೆ ಸುಮಾರಿಗೆ ನಡೆದಿದೆ. ಸ್ಥಳೀಯ ರೈತರಾದ ಸಂದೀಪ ಗೌಡ ಎಂಬವರ ಹೊಲದಲ್ಲಿ ನಾಗರಹಾವು ಕಾಣಿಸಿಕೊಂಡಿದೆ. ನಾಗರಹಾವನ್ನು ಗಮನಿಸಿದ ಸಂದೀಪ ಗೌಡ ಅವರು ತಕ್ಷಣವೇ ಅರಣ್ಯ ಇಲಾಖೆಯ ಅಧಿಕಾರಿಗಳಿಗೆ ಮಾಹಿತಿಯನ್ನು ನೀಡಿದ್ದಾರೆ. ಮಾಹಿತಿಯನ್ನು ಪಡೆದ ಅರಣ್ಯ ಇಲಾಖೆಯ ಅಮೋಘ ಅಸ್ಕಿ ಮತ್ತು ದಿಲೀಪ್ ಬೆಳ್ಳೆಣ್ಣವರ್ ಅವರು ಸ್ಥಳಕ್ಕೆ ದೌಡಾಯಿಸಿ ಸ್ಥಳೀಯರ ಸಹಕಾರದಲ್ಲಿ ಸುರಕ್ಷಿತವಾಗಿ ನಾಗರಹಾವನ್ನು ಹಿಡಿದು ಮರಳಿ ಕಾಡಿಗೆ ಬಿಟ್ಟು ಬಂದಿದ್ದಾರೆ.