ಗೋಕಾಕ: ಕೊಣ್ಣೂರ ಗ್ರಾಮದಲ್ಲಿ ಹೆಚ್ಚಾದ ಬೀದಿ ನಾಯಿಗಳ ಹಾವಳಿ
Gokak, Belagavi | Sep 15, 2025 ಕೊಣ್ಣೂರ ಗ್ರಾಮದಲ್ಲಿ ಹೆಚ್ಚಾದ ಬೀದಿ ನಾಯಿಗಳ ಹಾವಳಿ. ಅಂಬೇಡ್ಕರ ಗಲ್ಲಿಯಲ್ಲಿ ನಾಯಿಗಳು ಬೈಕ್ ಸವಾರರು ಸೇರಿದಂತೆ ಸಂಚರಿಸುವವರಿಗೆ ಸಮಸ್ಯೆಯಾಗಿ ಪರಿಣಮಿಸಿವೆ. ಹಲವು ಭಾಗಗಳಲ್ಲಿ ಬೀದಿ ನಾಯಿಗಳು ಗುಂಪುಗಳಲ್ಲಿ ಕಂಡು ಬರುತ್ತಿರುವುದರಿಂದ ಸಾರ್ವಜನಿಕರು ಮನೆ ಬಿಟ್ಟು ಹೊರಗೆ ಬರಲು ಹಿಂಜರಿಯುತ್ತಿದ್ದಾರೆ. ಬೀದಿ ನಾಯಿಗಳಿಗೆ ಕಡಿವಾಣ ಹಾಕಬೇಕೆಂದು ಸೋಮವಾರ ಸ್ಥಳೀಯರು ಆಗ್ರಹಿಸಿದ್ದರು. ಖಾನಾಪುರ ತಾಲೂಕಿನ ನಂದಗಡ ಪಟ್ಟಣದಲ್ಲಿ ಬೀದಿನಾಯಿಗಳ ಹಾವಳಿ ತೀವ್ರಗೊಂಡಿದ್ದು, ಮಕ್ಕಳು ಹಾಗೂ ವೃದ್ಧರು ಮನೆಯಿಂದ ಹೊರಗೆ ಬರಲು ಭಯಪಡುವಂತಾಗಿದೆ