ಬೆಳಗಾವಿ: ಕಿತ್ತೂರು ಉತ್ಸವ ಅಂಗವಾಗಿ ನಗರದಲ್ಲಿ ವೀರಜ್ಯೋತಿಗೆ ಸ್ವಾಗತ
ಕಿತ್ತೂರು ಉತ್ಸವ ಅಂಗವಾಗಿ ನಗರದಲ್ಲಿ ವೀರಜ್ಯೋತಿಗೆ ಸ್ವಾಗತ. ಕಿತ್ತೂರು ಉತ್ಸವದ ಅಂಗವಾಗಿ ರಾಜ್ಯದಾದ್ಯಂತ ಸಂಚರಿಸುತ್ತಿರುವ ವೀರಜ್ಯೋತಿಯನ್ನು ಸಂಭ್ರಮದಿಂದ ಬರಮಾಡಿಕೊಳ್ಳಲಾಯಿತು ಖಾನಾಪುರ ತಾಲ್ಲೂಕಿನ ನಂದಗಡ ಮೂಲಕ ಬೆಳಗಾವಿ ನಗರಕ್ಕೆ ಸೋಮವಾರ ಪ್ರವೇಶಿಸಿದ ಜ್ಯೋತಿಯನ್ನು ಮಹಾಪೌರರಾದ ಮಂಗೇಶ್ ಪವಾರ್ ಅವರು ಕಿತ್ತೂರು ಚೆನ್ನಮ್ಮ ವೃತ್ತದಲ್ಲಿ ಪೂಜೆ ಸಲ್ಲಿಸಿ ಬರಮಾಡಿಕೊಂಡರು. ಮಹಾನಗರ ಪಾಲಿಕೆ ಆಯುಕ್ತರಾದ ಶುಭ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಉಪ ನಿರ್ದೇಶಕರಾದ ವಿದ್ಯಾವತಿ ಭಜಂತ್ರಿ, ತಹಶೀಲ್ದಾರ ಬಸವರಾಜ ನಾಗರಾಳ, ಮುರುಗೇಶ್ ಶಿವಪೂಜಿ, ಉಪಸ್ಥಿತರಿದ್ದರು